ಕುಮಟಾ : ಉತ್ತರಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಗೆಲುವು ಖಚಿತವಾಗುತ್ತಿದೆ. ಈ ವಿಷಯ ತಿಳಿದು ಬಾಳಿಗಾ ಕಾಲೇಜಿಗೆ ಆಗಮಿಸಿದ ಬಿ.ಜಿ.ಪಿ ಶಾಸಕರುಗಳು ಹಾಗು ಮುಖಂಡರು ಅನಂತ ಕುಮಾರ್ ಹೆಗಡೆಯವರಿಗೆ ಬೃಹತ್ ಹೂವಿನ ಮಾಲೆ ಹಾಕಿ ಸಂಭ್ರಮಾಚರಣೆ ಮಾಡಿದರು.
ಇನ್ನೂ ಅಧಿಕೃತ ಘೋಷಣೆ ಬಾಕಿಯಿದ್ದರೂ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡು ಮುನ್ನುಗ್ಗುತ್ತಿರುವ ಅನಂತ ಕುಮಾರ್ ಹೆಗಡೆಯವರು ಆರನೇ ಬಾರಿ ಲೋಕಸಭೆ ಪ್ರವೇಶದ ಹೊಸ್ತಿಲಲ್ಲಿದ್ದೂ ಈ ಸಂದರ್ಭವನ್ನು ಜಿಲ್ಲಾ ಬಿಜೆಪಿಗರು ವಿಜ್ರಂಭಣೆಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಕಾರವಾರ ಶಾಸಕಿಯಾದ ಶ್ರೀಮತಿ ರೂಪಾಲಿ ನಾಯ್ಕ, ಕುಮಟಾ ಶಾಸಕರಾದದಿನಕರ ಶೆಟ್ಟಿ, ಭಟ್ಕಳ ಶಾಸಕರಾದ ಸುನೀಲ್ ನಾಯ್ಕ, ಮಾಜಿ ಶಾಸಕರಾದ ಸುನೀಲ್ ಹೆಗಡೆ ಸೇರಿದಂತೆ ಅನೇಕ ಮುಖಂಡರು ಇದ್ದರು.