ಕುಮಟಾ :ಬಹು ನಿರೀಕ್ಷಿತ 17 ನೇ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಉತ್ತರ ಕನ್ನಡದಲ್ಲಿ ಆರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ಅನಂತ್ ಕುಮಾರ್ ಹೆಗಡೆ ದಾಖಲೆ ಬರೆದಿದ್ದಾರೆ.

ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಹೆಸರು ಮಾಡಿದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಆಸ್ನೋಟಿಕರ್ ಸ್ಪರ್ಧಿಸಿದ್ದರು. ಹೆಗಡೆ ಅವರು ಒಟ್ಟು 7,83,211 ಮತಗಳನ್ನು ಪಡೆಯುವ ಮೂಲಕ 3,06,130ಮತಗಳನ್ನು ಪಡೆದ ಅಸ್ನೋಟಿಕರ್ ಅವರನ್ನು ಸೋಲಿಸಿದರು.

RELATED ARTICLES  ಯಾರು ಕಾಣದ್ದನ್ನು ಕಲಾಕಾರ ಕಾಣಿಸಿದ ಎಂಬಂತೆ ಈತನ ಕೈಚಳಕವನ್ನು ಒಮ್ಮೆ ನೋಡಲೆ ಬೇಕು.!

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರ ಅಂದರೆ 4,77,081ದಿಂದ ಗೆಲ್ಲುವ ಮೂಲಕ ಹೆಗಡೆ ದಾಖಲೆ ಬರೆದಿದ್ದಾರೆ.

RELATED ARTICLES  ಬಂದರು ನಿರ್ಮಾಣದ ನಂತರ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ : ಸಂಸದ ಅನಂತಕುಮಾರ ಹೆಗಡೆ

ಹವ್ಯಕ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯದವರೇ ಹೆಚ್ಚಿರುವ ಈ ಜಿಲ್ಲೆಯಲ್ಲಿ ವಿವಿಧ ಮತಗಳ ಜನರೂ ಸಹಬಾಳ್ವೆಯಲ್ಲೇ ಬದುಕು ನಡೆಸುತ್ತಿದ್ದಾರೆ. ಈ ಜಿಲ್ಲೆಯ ರಾಜಕೀಯದ ಬಗ್ಗೆ ಯೋಚಿಸುವುದಾದರೆ 2004 ರಿಂದ ಸತತ ಅನಂತ ಕುಮಾರ್ ಹೆಗಡೆ ಅವರೇ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಅವರೇ ಆಯ್ಕೆಯಾಗಿದ್ದು, ದಾಖಲೆ ಬರೆದಿದ್ದಾರೆ.