ಕುಮಟಾ: ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನಂತೆ ಇದು ಭದ್ರ ಬಿಜೆಪಿ ಕೋಟೆ ಎಂಬುದಾಗಿ ಬಿಂಬಿಸುವಂತೆ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಕಂಡ ಅನಂತ ಕುಮಾರ್ ಹೆಗಡೆಯವರಿಗೆ ಜಿಲ್ಲಾ ಬೂತ್ ಏಜೆಂಟ್ ಹಾಗೂ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ ಅಭಿನಂದನೆಸಲ್ಲಿಸಿದ್ದಾರೆ. ಅನಂತ ಕುಮಾರ್ ಹೆಗಡೆ ಗೆಲುವಿನ ನಗು ಅನಂತವಾಗಲಿ , ಸದಾಕಾಲ ಗೆಲುವಿನ ಬಲ ಅವರ ಜೊತೆಗಿರಲಿ ಎಂಬುದಾಗಿ ನಾಗರಾಜ ನಾಯಕ ತೊರ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಆರನೇ ಬಾರಿ ಸಂಸದರಾಗಿ ಅಯ್ಕೆಯಾದ ಅನಂತಕುಮಾರ ಹೆಗಡೆ ಯವರಿಗೆ ಅಭಿನಂದಿಸಿದ ಅವರು ಉತ್ತರಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಗೆಲುವು ಖಚಿತವಾಗುತ್ತಿದ್ದಂತೆ ಬಾಳಿಗಾ ಕಾಲೇಜಿಗೆ ಆಗಮಿಸಿದ ಬಿ.ಜಿ.ಪಿ ಶಾಸಕರುಗಳು ಹಾಗು ಮುಖಂಡರು ಗಳ ಜೊತೆಗೆ ಅನಂತ ಕುಮಾರ್ ಹೆಗಡೆಯವರ ಜೊತೆಗೆ ಸಂಭ್ರಮಾಚರಣೆ ಮಾಡಿದರು.
ಗೆಲುವಿನ ನಿರೀಕ್ಷೆ ಮೊದಲಿನಿಂದಲೂ ಇತ್ತು. ಇತ್ತರ ಕನ್ನಡದ ಜನರ ಪ್ರಬುದ್ದ ಮನಸ್ಥಿತಿಯ ಬಗ್ಗೆ ನಂಬಿಕೆಯೂ ಇತ್ತು ಈ ಗೆಲುವು ಜನತೆಯ ಗೆಲುವು ಹೀಗಾಗಿ ಸಮಸ್ತ ಜನತೆಗೆ ವಂದನೆಗಳನ್ನು ಸಲ್ಲಿಸುವುದಾಗಿ ನಾಗರಾಜ ನಾಯಕ ತೊರ್ಕೆ ಹೇಳಿದರು.
ಅನಂತ ಕುಮಾರ್ ಹೆಗಡೆಯವರ ಜೊತೆಗೆ ಒಡನಾಟ ಹಾಗೂ ಅವರ ಸಾಮಿಪ್ಯ ನಮಗೆ ಶಕ್ತಿ ತುಂಬಿದೆ. ಈ ಗೆಲುವು ಅವರಿಗೂ ನಮಗೂ ಬಲ ತಂದಿದ್ದು ಈ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನತೆಯ ಕಷ್ಟಕ್ಕೆ ಸ್ಪಂದಿಸಲು ಸದಾ ಜನತೆಯ ಜೊತೆಗಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.