ಸ್ನೇಹಿತರೆ, ಇದೇ ಸೋಮವಾರ  ಆಗಸ್ಟ್ 7 ರ ರಾತ್ರಿ ಚಂದ್ರಗ್ರಹಣ ಸಂಭವಿಸಲಿದ್ದು ಸಮಾಜ ಘಾತುಕ ವ್ಯಕ್ತಿಗಳು ಇಲ್ಲ ಸಲ್ಲದ ಸುಳ್ಳುಗಳಿಂದ ಕೂಡಿದ ಮೌಢ್ಯಗಳ ಸರಪಳಿಗಳನ್ನು ಹೆಣೆದು ಜನರನ್ನು ಭಯ ಭೀತರನ್ನಾಗಿಸಿಸುತ್ತಾರೆ,

ಸ್ನೇಹಿತರೇ ಕಟ್ಟೆಚ್ಚರ.

ಚಂದ್ರಗ್ರಹಣ ಒಂದು ಆಕಾಶ ಚಪ್ಪರದಲ್ಲಿ ನಡೆಯುವ ಖಗೋಳ ವಿಧ್ಯಮಾನಗಳಲ್ಲೊಂದಾಗಿದ್ದು, ಈ ವಿಧ್ಯಮಾನವು ಯಾವುದೇ ಪ್ರಾಣಿ ಅಥವಾ ವ್ಯಕ್ತಿಯ ಮೇಲೆ ವೈಯಕ್ತಿಕವಾಗಿ ಪರಿಣಾಮ ಬೀರುವುದಿಲ್ಲ. ಅಂದು ಸೂರ್ಯ ಅಥವಾ ಚಂದ್ರರಿಂದ ಹಾನಿಮಾಡುವ ಯಾವುದೇ ವಿಷಕಾರುವ ವಿಷೇಶ ಕಿರಣಗಳು ಸೂಸುತ್ತವೆ ಎಂಬುದಕ್ಕೆ ಯಾವುದೇ ಎಂದು ವಿಜ್ಞಾನದ ಪುರಾವೆಗಳಿಲ್ಲ.

ನಮ್ಮ ಹಿರಿಯವರು ನಂಬಿದ್ದಂತೆ ಯಾವುದೇ ರಾಹು ಅಥವಾ ಕೇತುಗಳು ಸೂರ್ಯ ಮತ್ತು ಚಂದ್ರರನ್ನು ನುಂಗಲು ಪ್ರಯತ್ನಿಸುವುದು ಕಪೋಲ ಕಲ್ಪಿತವಾದ ಮಾತ್ರ. ಆ ಕಥೆಗಳು ಕಟ್ಟುಕಥೆಗಳೆಂದು ವಿಜ್ಞಾನ ಸಾಭೀತು ಪಡಿಸಿದೆ. ಅಲ್ಲದೇ ರಾಹು ಅಥವಾ ಕೇತುಗಳು ಸೌರವ್ಯೂಹದಲ್ಲೆಲ್ಲೂ ಅಸ್ತಿತ್ವದಲ್ಲೇ ಇಲ್ಲ. ಅಂದ ಮೇಲೆ ರಾಹುಕಾಲ ಅಥವಾ ಗುಳಿಕಕಾಲಗಳೆಂಬುವೂ ಕಪೋಲಲ್ಪಿತ ವಾದಗಳು ಮಾತ್ರ.

RELATED ARTICLES  ನೇಕಾರರಿಗೆ ಸಾಲಮನ್ನಾ ಭಾಗ್ಯ ಘೋಷಿಸಿದ ರಾಜ್ಯ ಸರ್ಕಾರ.

ಆಕಾಶದಲ್ಲಿ ಭೂಮಿಯು ಸೂರ್ಯನ ಸುತ್ತ ಸುತ್ತುತಿದ್ದರೆ, ಚಂದಿರನು ಭೂಮಿಯ ಸುತ್ತ ಸುತ್ತುತಿದ್ದಾನೆ. ಈ ಸಂದರ್ಭಗಳಲ್ಲಿ ಕೆಲವೊಮ್ಮೆ ಸೂರ್ಯ, ಭೂಮಿ ಮತ್ತು ಚಂದಿರರು ಒಂದೇ ಸರಳ ರೇಖೆಯಲ್ಲಿ ಬಂದಾಗ ಗ್ರಹಣಗಳು ಸಂಭವಿಸುತ್ತವೆ.

*ಇನ್ನು ಚಂದ್ರಗ್ರಹಣ* : ಸೂರ್ಯ ಮತ್ತು ಚಂದ್ರಿನ ನಡುವ ಭೂಮಿ ಬಂದಾಗ. ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು(ಹಗಲು ನಡೆಯುತ್ತಿರುವ ಪಾರ್ಶ್ವದಲ್ಲಿ), ಭೂಮಿಯ ನೆರೆಳು ಚಂದ್ರನ ಮೇಲೆ ಬಿದ್ದಾಗ, ಚಂದ್ರನ ಮೇಲೆ ಕತ್ತಲೆ ಆವರಿಸುತ್ತದೆ, ಆಗ ಭೂಮಿಯ ಮತ್ತೊಂದು ಭಾಗದಲ್ಲಿ (ರಾತ್ರಿ ನಡೆಯುತ್ತಿರುವ ಪಾರ್ಶ್ವದಲ್ಲಿ) ಚಂದಿರನ ಮೇಲೆ ಕತ್ತಲು ಆವರಿಸಿದ್ದು ಗೋಚರಿಸುತ್ತದೆ. *ಇದನ್ನೇ ಚಂದ್ರಗ್ರಹಣ ಎಂದು ಕರೆಯುತ್ತಾರೆ.*

*ಇದೇ ಆಗಸ್ಟ್ 7 ರ ಸೋಮವಾರ ರಾತ್ರಿ ಆಗಸದಲ್ಲಿ ಚಂದ್ರಗ್ರಹಣ ಸಂಭವಿಸಲಿದ್ದು ಅಂದು ರಾತ್ರಿ 9.20ಕ್ಕೆ ಗ್ರಹಣ ಆರಂಭವಾಗುತ್ತದೆ ಯಾದರೂ ಭಾರತದಲ್ಲಿ ರಾತ್ರಿ 10.52 ರಿಂದ ಮಧ್ಯರಾತ್ರಿ 12.48ರವರಗೂ ಕಾಣಸಿಗಲಿದೆ. ಈ ಅಭೂತಪೂರ್ವ ವಿದ್ಯಮಾನವನ್ನು ಎಲ್ಲರೂ ನೋಡಿ ಆನಂದಿಸಿ ಖಗೋಳ ಕೌತುಕವನ್ನು ಆಸ್ವಾಧಿಸಿ*

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

*ಗ್ರಹಣಗಳ ಬಗ್ಗೆ ಏನೂ ತಿಳಿಯದವರು ನಿರ್ಭೀತರಾಗೇ ಇರುತ್ತಾರೆ. ಆದರೆ ಈ ಅಕ್ಷರ ಕಲಿತ ಕೆಲವು ತಥಾಕಥಿತ ಶಿಕ್ಷಿತರು ಗ್ರಹಣದ ಬಗ್ಗೆ ಇಲ್ಲಸಲ್ಲದ ವೂಹಾಪೂವಗಳನ್ನು ಸೃಷ್ಟಿಸಿ, ತಾವುಗಳು ಮೌಢ್ಯಕ್ಕೆ ಬಲಿಯಾಗುವುದಲ್ಲದೇ ಮುಗ್ದರನ್ನೂ ಅಂಧಕಾರದ ಸುಳಿಗೆ ನೂಕುತ್ತಾರೆ.*

ನಿಜವಾಗಿ ಸಮಾಜದ ಬಗ್ಗೆ ಕಳಕಳಿ ಇರುವವರು ಜನಸಾಮಾನ್ಯರಲ್ಲಿ ವಿಜ್ಞಾನ ಮತ್ತು ವೈಚಾರಿಕ ಜ್ಞಾನ ಬೆಳಸುತ್ತಾ, ಸಮಾಜವನ್ನು ವೈಚಾರಿಕ ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ.

ಚಂದ್ರಗ್ರಹಣದಿಂದ ಯಾವುದೇ ಅನಿಷ್ಟ ಯಾರ ಮೇಲೂ ಸಂಭವಿಸದು. ಎಂಬ ಅರಿವನ್ನು ಮೂಡಿಸಲು ಯತ್ನಿಸೋಣ. ದೇಶವನ್ನು ವೈಜ್ಞಾನಿಕ ಚಿಂತನೆಯತ್ತ ಕೊಂಡೊಗೋಣ. ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಚಿಕ್ಕ ಚಿಕ್ಕ ದೇಶಗಳು ಭಾರತ ದೇಶಕಿಂತ ಎಷ್ಟೋ ಮುಂದಿವೆ. ಬನ್ನಿ ವೈಜ್ಞಾನಿಕ ಚಿಂತನೆ ಭಿತ್ತಿ ದೇಶವನ್ನು ಪ್ರಗತಿಯತ್ತ ಕೊಂಡೂಗಲು ಕೈಜೋಡಿಸೂಣ.

ಬಿ.ಜಿ. ಗೋಪಾಲಕೃಷ್ಣ, ಫೋನ್ :9343431828, ಜಿಲ್ಲಾ ಉಪಾಧ್ಯಕ್ಷ, ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲೆ, ಹಾಸನ.

(ಮಾಹಿತಿಗಾಗಿ ಪ್ರಕಟಿಸಿದೆ)