ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುಧ ಭರ್ಜರಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಅವರು ‘ಇದು ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು’ ಎಂದಿದ್ದಾರೆ.

“ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ ತೋಳ್ಬಲ ಎಲ್ಲವನ್ನೂ ಮೀರಿ, ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ. ಮಂಡ್ಯದ ಜನತೆಗೆ ಕೋಟಿ ಕೋಟಿ ಅನಂತ ಅನಂತ ಅಭಿನಂದನೆಗಳು” ಎಂದು ಸುಮಲತಾ ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

RELATED ARTICLES  ಹೇಮಾವತಿ ಜಲಾಶಯದಿಂದ 15000ಕ್ಯೂಸೆಕ್ಸ ನೀರು ಬಿಡುಗಡೆ.

ಅಷ್ಟೇ ಅಲ್ಲದೆ, “ಇದು ನನ್ನ ಗೆಲುವಲ್ಲ, ಅಂಬರೀಷ್ ಅವರ ಗೆಲುವು ಆಗಿದೆ. ನನ್ನ ಗೆಲುವಿಗೆ ಮಂಡ್ಯ ಜನತೆ ಮಾತ್ರವಲ್ಲದೆ ರಾಜ್ಯದ ಜನತೆಯೇ ಹಾರೈಸಿದ್ದಾರೆ. ಈ ಹಾದಿಯಲ್ಲಿ  ಚಿತ್ರೋದ್ಯಮದ ಗಣ್ಯರು, ರಾಜ್ಯದ ಜನತೆಯೇ ಬೆಂಬಲಿಸಿದ್ದು, ಅವರೆಲ್ಲರಿಗೂ ಚಿರಖುಣಿಯಾಗಿರುವುದಾಗಿ ಹೇಳಿರುವ ಸುಮಲತಾ ಅವರು, ಮಂಡ್ಯ ಕ್ಷೇತ್ರದ ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸದ್ಯದಲ್ಲೇ ಜನರ ಮುಂದೆ ವಿವರಿಸಲಿದ್ದೇನೆ” ಎಂದಿದ್ದಾರೆ.

RELATED ARTICLES  ಇಂಧನ ಬೆಲೆಯೇರಿಕೆ ಖಂಡಿಸಿ ಎಲ್ ಪಿಜಿ ಸಿಲೆಂಡರ್ ನ ಪ್ರತಿಕೃತಿಯನ್ನು ಎತ್ತಿ ತೋರಿಸಿದ ರಾಹುಲ್ ಗಾಂಧಿ.