ದೇಶದೆಲ್ಲೆಡೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಮತ್ತೊಮ್ಮೆ ಮೋದಿ ಎಂಬ ಬಿಜೆಪಿ ಕಾರ್ಯಕರ್ತರ ಆಶಯ ಸಾಕಾರಗೊಂಡಿದೆ. ಐತಿಹಾಸಿಕ ಗೆಲುವಿಗೆ ಕಾರಣರಾದ ಜನರಿಗೆ ಶುಭಾಶಯ ಕೋರಿದ್ದಾರೆ.
ತಮ್ಮ 2014ರ ದಾಖಲೆಗಳನ್ನು ಮುರಿದು 2019ರಲ್ಲಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಕಚೇರಿಯಲ್ಲಿ ತಮ್ಮ ಗೆಲುವಿಗೆ ಕಾರಣರಾದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದರು.
“ಇದು ಪ್ರಪಂಚದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ದೊಡ್ಡ ಐತಿಹಾಸಿಕ ಘಟನೆ. ದೇಶಕ್ಕೆ ಸ್ವಾತಂತ್ರ ಸಿಕ್ಕಿದ ಬಳಿಕ ಅನೇಕ ಚುನಾವಣೆ ನಡೆದಿದೆ ಹಾಗೂ ನಡೆಯಬೇಕಿದೆ. ಈ ಚುನಾವಣಾ ಇತಿಹಾಸದಲ್ಲಿಯೇ ಅಧಿಕ ಸಂಖ್ಯೆಯ ಮತದಾನ ಈ ಬಾರಿ ಆಗಿದೆ. ಅದು ತಾಪಮಾನ ಏರಿಕೆಯಂತಹ ಸಂದರ್ಭದಲ್ಲಿ. ಇದು ಪ್ರಜಾಪ್ರಭುತ್ವದತ್ತ ಭಾರತದ ನಾಗರಿಕರ ಅರಿವು ತೋರಿಸುತ್ತದೆ. ಜಗತ್ತು ಇದನ್ನು ಗುರುತಿಸಬೇಕಿದೆ. ಭಾರತದ ಜನರು ಪ್ರಜಾಪ್ರಭುತ್ವ ಶಕ್ತಿಯ ಬಗ್ಗೆ ತಿಳಿಯುತ್ತಿದ್ದಾರೆ” ಎಂದರು.