ಕಾರವಾರ : ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಅನಂತಕುಮಾರ ಹೆಗಡೆರವರು ದಾಖಲೆಯ ಐತಿಹಾಸಿಕ ಗೆಲುವು ಸಾಧಿಸಿದ ಸಂಭ್ರಮಾಚರಣೆಯನ್ನು ಇಂದು ಕಾರವಾರ ನಗರದ ಭಾರತೀಯ ಜನತಾ ಪಕ್ಷದ ಕಚೇರಿಯ ಎದುರಿಗೆ ನಡೆಸಲಾಯಿತು.

RELATED ARTICLES  ವಿಶ್ವಶಾಂತಿ ಬಾಲೆ’ ಇನ್ನು ಇಂಡಿಯಾ ಬುಕ್ ಆಫ್ ರೆಕಾರ್ಡಗೆ

ಅಪಾರ ಕಾರ್ಯಕರ್ತ ಮಿತ್ರರು ಹಾಗೂ ಸಾರ್ವಜನಿಕರೊಂದಿಗೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದರು. ಕಾರವಾರದ ಇತಿಹಾಸದಲ್ಲೇ ಭಾರತೀಯ ಜನತಾ ಪಕ್ಷದ ಅತಿದೊಡ್ಡ ಸಂಭ್ರಮಾಚರಣೆ ಇದಾಗಿತ್ತು.

RELATED ARTICLES  ಕಿರಿಯರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಆದರ್ಶ ವೃತ್ತಿ ಬದುಕು ರೂಢಿಸಿಕೊಳ್ಳಬೇಕು; ಪ್ರವೀಣಕುಮಾರ ನಾಯ್ಕ

ಮಾನ್ಯ ಶಾಸಕರು ಸಂಭ್ರಮಾಚರಣೆಯಲ್ಲಿ‌ ಪಾಲ್ಗೊಂಡು ಸಿಹಿ ಹಂಚಿ ಸಂಭ್ರಮಿಸಿದರು, ಕಾರ್ಯಕರ್ತರ ಜೊತೆಗೆ‌ಕುಣಿದು ಸಂಭ್ರಮಾಚರಣೆ ನಡೆಸಿದ್ದು ವಿಶೇಷವಾಗಿತ್ತು.