ಕುಮಟಾ : ಉತ್ತರ ಕನ್ನಡದಲ್ಲಿ ಈಗಾಗಲೇ ಕಿರುಚಿತ್ರಗಳ ಟ್ರೆಂಡ್ ಸೃಷ್ಟಿ ಮಾಡಿರುವ ನಿರ್ದೇಶಕ ವಿನಾಯಕ ಬ್ರಹ್ಮೂರು ಅವರು ಇದೀಗ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ. ಬಹುದಿನಗಳ ಇವರ ಕಲ್ಪನೆಯ “ಶಾರ್ಟ್ ಮೂವಿ ಕ್ಲಬ್”ಗೆ ಆಚೆ ಚಿತ್ರ ಬಿಡುಗಡೆ ಸಮಾರಂಭದ ದಿನದಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿರುವ ಇವರು ಜಿಲ್ಲೆಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ನೀಡಲು ಹಾಗೂ ಕಲಾಸಕ್ತರನ್ನು ಬೆಳೆಸುವ ದಿಸೆಯಲ್ಲಿ ಈ ಕ್ಲಬ್ ಸ್ಥಾಪಿಸುತ್ತಿದ್ದಾರೆ ಎನ್ನಲಾಗಿದೆ. ಕಿರುಚಿತ್ರಗಳೆಡೆ ಆಸಕ್ತಿ ಇರುವವರಿಗೆ, ಸಿನಿಮಾರಂಗದ ಕನಸು ಕಾಣುವವರಿಗೆ ಹಾಗೂ ಇನ್ನಿತರ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮನಸ್ಸಿರುವವರಿಗೆ ಈ ಕ್ಲಬ್ ನೆರವಾಗಲಿದೆ.


ತನ್ನ ವ್ಯಾಪ್ತಿಯಲ್ಲಿ ಹೆಚ್ಚು ಕಿರುಚಿತ್ರಗಳ ಸಂಯೋಜನೆಗೆ ಪ್ರೋತ್ಸಾಹಿಸುವುದು. ಕಿರು ಚಿತ್ರಗಳ ಪ್ರಚಾರ ಹಾಗೂ ಅವುಗಳ ತಯಾರಿಕೆಗೆ ಉತ್ತೇಜನ ನೀಡುವುದು. ಕಿರುಚಿತ್ರಗಳ ತಯಾರಿ ಹಾಗೂ ಅವುಗಳ ಬಿಡುಗಡೆ ಮತ್ತು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದು. ಕಿರುಚಿತ್ರ ತಯಾರಿಕೆಯ ಬಗ್ಗೆ ಮಾರ್ಗದರ್ಶನ, ತಂತ್ರಜ್ಞಾನ ಹಾಗೂ ಅಗತ್ಯ ವಿಷಯಗಳ ತರಬೇತಿ ವ್ಯವಸ್ಥೆ ಮಾಡಿಸುವುದು. ಭಾರತದ ಉಚ್ಚ ಸಂಸ್ಸøತಿಯ ರಕ್ಷಣೆ ಮತ್ತು ಪೋಷಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವುದು. ಹಾಗೂ ಈ ಸಂಬಂಧಿ ಅಗತ್ಯ ಸಂಸ್ಥೆ ಯಾ ಪ್ರಚಾರದ ಎಲ್ಲ ಅವಶ್ಯಕತೆಗಳನ್ನು ಪೂರೈಸುವುದು. ಸಂಗೀತ ,ಕಲೆ,ನೃತ್ಯ ಹಾಗೂ ಇನ್ನಿತರ ಕಲಾಪ್ರಕಾರಗಳ ಪರಿಚಯ ಮತ್ತು ಅವುಗಳ ಕಲಿಕೆಗೆ ಯೋಗ್ಯ ಕಾರ್ಯಕ್ರಮ ರೂಪಿಸುವುದು. ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನದ ಇತ್ತೀಚಿನ ಬೆಳವಣಿಗೆಗಳನ್ನು ಲಕ್ಷದಲ್ಲಿಟ್ಟು ಆ ದಿಸೆಯಲ್ಲಿ ಕಾರ್ಯಕ್ರಮ ನಿಗದಿಪಡಿಸುವುದು. ಸಾಮಾಜಿಕ ಸಾಮರಸ್ಯ ಹಾಗೂ ವ್ಯಕ್ತಿತ್ವ ವಿಕಾಸದ ಕುರಿತಾದ ಕಾರ್ಯಕ್ರಮ ಹಮ್ಮಿಕೊಳ್ಳುವುದು.ಇದಕ್ಕೆ ಸಂಬಂಧಿಸಿ ವಿವಿಧ ಇಲಾಖೆಗಳೊಂದಿಗೆ ಮತ್ತು ಜಿಲ್ಲೆಯ ಯಾವುದೇ ಸಂಘ ಸಂಸ್ಥೆಯ ಜೊತೆ ಸೇರಿ ಕಾರ್ಯಕ್ರಮ ರೂಪಿಸುವುದು ಶಾರೀರಿಕ ವಿಕಸನಕ್ಕೆ ಅಗತ್ಯವಾದ ಯೋಗ ಶಿಕ್ಷಣ,ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸುವುದು. ಸಾಮಾನ್ಯ ಶಿಕ್ಷಣ ಪದ್ದತಿಯಲ್ಲಿ ದೊರೆಯದ ಆದರೆ ಬದುಕಿಗೆ ಯೋಗ್ಯವಾದ ಶಿಕ್ಷಣದ ಅಗತ್ಯತೆಗಳನ್ನು ಪೂರೈಸುವುದು. ಈ ಕುರಿತಾದ ವೈವಿದ್ಯಮಯ ಕಾರ್ಯಕ್ರಮಗಳನ್ನು ಸಂಯೋಜಿಸುವುದು. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಚಾರಿತ್ರ್ಯನಿರ್ಮಾಣ, ದೇಶ ಭಕ್ತಿ, ದೇಶಪ್ರೇಮ ಬೆಳೆಸುವ ಕುರಿತಾದ ಪ್ರಯತ್ನಗಳನ್ನು ಮಾಡುವುದು.ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವುದು ನಮ್ಮ ಧ್ಯೇಯೋದ್ದೇಶಗಳನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಕಿರುಚಿತ್ರ ಕ್ಲಬ್ ಯಾ ಚಲನಚಿತ್ರ ವಾಣಿಜ್ಯ ಮಂಡಳಿಯ ಸಲಹೆ, ಸಹಕಾರ ಹಾಗೂ ಸಹಯೋಗ ಪಡೆಯುವುದು. ಸಾಂಸ್ಕøತಿಕ ಹಾಗೂ ಕಲಾ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು. ಹಾಗೂ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುವುದು. ಪ್ರತಿಭಾವಂತ ಹಾಗೂ ಗ್ರಾಮೀಣ ಕಲಾ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು. ಕಿರು ಚಿತ್ರ ತಯಾರಿಗೆ ಮನಸ್ಸಿರುವ ಹಾಗೂ ಪ್ರಯತ್ನ ಮಾಡುತ್ತಿರುವ ಆರ್ಥಿಕವಾಗಿ ತೀರಾ ಅಗತ್ಯವಿರುವ ಬಡ ಹಾಗೂ ಪ್ರತಿಭಾವಂತರಿಗೆ ಸಹಾಯ ನೀಡುವುದು. ಅಥವಾ ದಾನಿಗಳನ್ನು ಗುರ್ತಿಸಿ ಸಹಾಯಧನ ಪಡೆದು ಅಗತ್ಯ ಜನರಿಗೆ ಒದಗಿಸುವುದು. ಕಿರು ಚಿತ್ರ ಸಂಬಂಧ ಪ್ರವಾಸಗಳು, ಸ್ಪರ್ಧೆಗಳನ್ನು ಏರ್ಪಡಿಸುವುದು. ವಿಶೇಷ ದಿನಾಚರಣೆಗಳ ಆಚರಣೆ, ಸೇವೆ, ಸ್ವಚ್ಚತೆ, ಸ್ಪರ್ಧೆಗಳ ಸಂಯೋಜನೆ. ಕಿರುಚಿತ್ರ ಹಾಗೂ ಸಿನಿಮಾ ರಂಗಗಳ ಮೂಲಕ ಸಮಾಜದಲ್ಲಿನ ನಿರುದ್ಯೋಗಿಗಳಿಗೆ ಪೂರಕ ವಾಗುವಂತೆ ಉದ್ಯೋಗದ ಅರಿವು ಕಾರ್ಯಕ್ರಮ ಹಾಗೂ ಸ್ವಂತ ಉದ್ಯೋಗಕ್ಕೆ ಅವಕಾಶ ನೀಡುವ ಸಂಸ್ಥೆಗಳನ್ನು ಸ್ಥಾಪಿಸಿ ಕೆಲಸ ನೀಡುವುದು. ಜಿಲ್ಲೆಯ ಕಲಾ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸುವುದು. ಈ ಮೇಲಿನ ಉದ್ದೇಶಗಳನ್ನು ನೆರವೇರಿಸಲು ಪೂರಕವಾದ ನಿಧಿ ಸಂಗ್ರಹಣೆ, ದತ್ತನಿಧಿ ಸ್ಥಾಪನೆ ಇತ್ಯಾದಿ ಹಲವಾರು ರೀತಿಯ ಹಣಕಾಸಿನ ಸೌಲಭ್ಯವನ್ನು ಒದಗಿಸಿಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು. ಹಾಗೂ ಸಂಗ್ರಹಿಸಿದ ಹಣವನ್ನು ಸಂಘದ ಸದಸ್ಯರಿಗೆ ಹಂಚದೇ ಸಂಘದ ಸದುದ್ದೇಶಕ್ಕಾಗಿ ಬಳಸುವಂತೆ ಕ್ರಮ ಕೈಗೊಳ್ಳುವುದು ಮುಂತಾದ ಧ್ಯೇಯೋದ್ದೇಶದೊಂದಿಗೆ ಉತ್ತರಕನ್ನಡ ಶಾರ್ಟ್ ಮೂವಿ ಕ್ಲಬ್ ಸ್ಥಾಪನೆಯಾಗಲಿದೆ. ಮೇ 26ರಂದು ನೆಲ್ಲಿಕೇರಿಯ ಹಳೇ ಬಸ್ ನಿಲ್ದಾಣದ ಬಳಿ ನಡೆಯಲಿರುವ ಇವರ ಆಚೆ ಚಿತ್ರ ಬಿಡುಗಡೆ ಸಮಾರಂಭದಲ್ಲಿ ಗಣ್ಯರಿಂದ ಚಾಲನೆ ದೊರೆಯಲಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು