ಶಿರಸಿ: ಚುನಾವಣಾ ಗೆಲುವಿಗೆ ಅಭಿನಂದನೆ ಸಲ್ಲಿಸುವ ಹಾಗೂ ಬರುವ ನೂತನ ಸರ್ಕಾರ ಕೈಗೊಳ್ಳಬೇಕಾದ ಕೆಲವು ಆದ್ಯತಾ ಕೆಲಸಗಳ ಬಗ್ಗೆ ಮೋದಿಯವರ ಗಮನ ಸೆಳೆಯಲು ಕಾಂಗ್ರೆಸ್ ಮುಖಂಡ ಹಾಗೂ ಸಚಿವರಾದ ಆರ್.ವಿ ದೇಶಪಾಂಡೆಯವರು ಪ್ರಮುಖ ವಿಚಾರಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಪತ್ರದಲ್ಲಿ ಏನಿದೆ?

ಸಚಿವರು ಕೈಗಾರಿಕಾ ಉತ್ಪಾದನ ದೇಶದ ಜಿಡಿಪಿಯು ಶೇ.30ರಷ್ಟು ಪಾಲು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ತಯಾರಿಕಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರ ಫಲವಾಗಿ ದೇಶದಲ್ಲಿ ಯುವ ಜನರಿಗೆ ಉದ್ಯೋಗವಿಲ್ಲದಂತಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದಿದೆ. ಜಿಡಿಪಿ ನಿರೀಕ್ಷಿತ ಬೆಳವಣಿಗೆ ತಲುಪಿರುವುದಿಲ್ಲ.
ದೇಶದ ನಿರುದ್ಯೋಗ ದರ ಶೇ.16 ಇದ್ದು ಇದು ಕಳೆದ 4 ವಶಕಗಳಲ್ಲೇ ಅತ್ಯಧಿಕವಾಗಿದೆ , ಇಂತಹ ಪರಿಸ್ಥಿತಿಯಲ್ಲಿ ತಯಾರಿಕಾ ವಲಯದ ಜಪಳಿ, ಆಟಿಕೆಗಳು, ಸೇವಾ ವಲಯ, ಇತ್ಯಾದಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಆದ್ಯತೆ ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿ ಮಾಡುವುದು ಅವಶ್ಯವಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ವಿಶ್ವದಲ್ಲೇ ಭಾರತವು ಅತ್ಯಧಿಕ ಯುವಕರನ್ನು ಹೊಂದಿರುವ ದೇಶವಾಗಿದ್ದು, ಜಾಗತಿಕರಣ ಹಾಗೂ ಅಸ್ಥಿರ ತಾಂತ್ರಿಕತೆಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ಕೌಶಲ್ಯವು ಅಗತ್ಯವಿದೆ. ಯುವಕರಲ್ಲಿ ಕೌಶಲ್ಯವನ್ನು ಹೆಚ್ಚಿಸುವುದರಿಂದ ಅವರಲ್ಲಿ ಉದ್ಯೋಗ ಸಾಮಥ್ರ್ಯ , ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಸಾಮಾಜಿಕ ಸ್ವೀಕಾರವನ್ನೂ ಸಾಧ್ಯವಾಗಿಸುತ್ತದೆ. ಮಾನವ ಶ್ರಮವನ್ನು ಪ್ರತ್ಯಾಯೋಜಿಸುವ ತಾಂತ್ರಿಕತೆಯ ನಿರುದ್ಯೋಗ ಸಮಸ್ಸೆಗೆ ಮೂಲ ಕಾರಣವಾದರೂ ಹಳೆಯ ಪ್ರಮಿಕ ಕೌಶಲ್ಯ ಬಲಕ್ಕೆ ಆಧುನಿಕ ಕೌಶಲವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯ. ಅಲ್ಲದೇ, ಹೊಸ ತಾಂತ್ರಿಕ ಕೌಶಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರ ಅವಶ್ಯಕತೆ ಇದೆ.

RELATED ARTICLES  ಗಂಗಾವತರಣ ಲೋಕಾರ್ಪಣೆ - ಪರಿಶುದ್ಧ ಕನ್ನಡಕ್ಕೆ ಯಕ್ಷಗಾನ ನೋಡಬೇಕು: ಮುಖ್ಯಮಂತ್ರಿ

ಕೃಷಿ ಕ್ಷೇತ್ರ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು , ಜಿಡಿಪಿಯಲ್ಲಿ ಶೇ. 18ರಷ್ಟು ಪಾಲು ಹೊಂದಿದೆ. ಅಲ್ಲದೇ, ದೇಶದ ಶ್ರಮಿಕ ಕ್ಷೇತ್ರಕ್ಕೆ ಶೇ.44 ಔದ್ಯಮಿಕ ಕೊಡುಗೆ ನೀಡಿದೆ. ಆದುದರಿಂದ ಕೃಷಿ ಕ್ಷೇತ್ರವನ್ನು ನವೀಕರಿಸಿದಲ್ಲಿ , ಸಮಗ್ರ ಅಭಿವೃದ್ಧಿ ಕಾಣಬಹುದಾಗಿದೆ. ಆದರೆ ಇಲ್ಲಿ ಸಮಸ್ಯೆಗಳು ಅನೇಕ ಅಂತರ್ಜಲ ಹಾಗೂ ಮಣ್ಣಿನ ಫಲವತ್ತತೆ ಕ್ಷೀಣಿಸುವಿಕೆ , ಭೂ ಸವಕಳಿ , ಜಲ ನಿರ್ವಹಣೆ , ಬೆಳೆಗಳ ವಲಯವಾರು ಅಸಮತೋಲನ, ಬೆಲೆಯ ಏರಿಳಿತ ಮುಂತಾದ ಸಮಸ್ಯೆಗಳು ಆಧಿಕವಾಗಿದ್ದು ಕೃಷಿ ಕ್ಷೇತ್ರಕ್ಕೆ ಮಾರಕವಾಗಿದೆ.

RELATED ARTICLES  ಉಪಖಜಾನೆಯ ನಿರ್ದೇಶಕರಾಗಿ ಸಂದೀಪ ಮಾಳಗಿ ಅಧಿಕಾರ ಸ್ವೀಕಾರ.

ಪ್ರತಿ ವರ್ಷವೂ ರೈತ ಸಮುದಾಯ ಕೃಷಿ ಕ್ಷೇತ್ರ ಉತ್ತಮಗೊಳ್ಳುವುದೆಂದು ಸರ್ಕಾರಗಳತ್ತ ಮುಖ ಮಾಡಿ ಭರವಸೆಯಿಂದ ಕಾಯುತ್ತಿದೆ. ಆದರೆ ಸರ್ಕಾರದ ಯೋಜನೆಗಳು ಜಾರಿಯಾಗುವಲ್ಲಿ ಸೋಲುತ್ತಿವೆ. ಇದರ ಬಗ್ಗೆ ಮರು – ಪರಿಶೀಲನೆ ಅಗತ್ಯವಾಗಿ ಆಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾರತದಲ್ಲಿ ಕೃಷಿಯನ್ನು ಒಂದು ಆಕರ್ಷಕ, ಲಾಭದಾಯಕ ಉದ್ಯೋಗವನ್ನಾಗಿಸುವಲ್ಲಿ ಯೋಚಿಸಬೇಕಿದೆ. ಇದರಿಂದ ನಗರ ಪ್ರದೇಶಗಳ ಮೇಲಿನ ಒತ್ತಡ, ಸಂಚಾರ ದಟ್ಟಣೆ, ಪರಿಸರ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ಪ್ರಾದೇಶಿಕ ಸಮತೋಲನವನ್ನು ಸಾಧಿಸಿದಂತಾಗುತ್ತದೆ.

ಜಿಎಸ್ ಟಿಯನ್ನು ಮರುಪರಿಶೀಲಿಸುವ ಅಗತ್ಯವನ್ನು ಒತ್ತಿ ಹೇಳಿದ ದೇಶಪಾಂಡೆ ಅವರು ಈಗಿರುವ ಸಾಟ್ರ್ಗಳನ್ನು ಪರಿಷ್ಕರಿಸಿ ಸುಲಭ ಸ್ವಾಬ್ ಗಳನ್ನು ಪರಿಚಯಿಸುವ ಮೂಲಕ ಸುಗಮ ರೀತಿಯಲ್ಲಿ ಬೃಹತ್ ಮೊತ್ತದ ತೆರಿಗೆಯನ್ನು ಸಂಗ್ರಹಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ಈ ಎಲ್ಲಾ ಅಂಶಗಳನ್ನು  ದೂರದೃಷ್ಟಿಯಿಂದ ಆಲೋಚಿಸಿ ಆದ್ಯತೆಯ ಮೇಲೆ ಕ್ರಮ ವಹಿಸುವ ಅಗತ್ಯವಿದೆ ಎಂಬುದನ್ನು ಸಹ ಸಚಿವ ದೇಶಪಾಂಡೆ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.