ಕಾರವಾರ:ಗೋವಾ, ಅಸ್ಸಾಂ, ಉತ್ತರಕರ್ನಾಟಕ ಮೂಲದ 15 ಯುವಕರು ತಂಡ ಕಾರವಾರ ನಗರದ ಬೈತಖೋಲ್ ,ಸುಭಾಸ್ ವೃತ್ತದಲ್ಲಿ ಮತ ಪ್ರಚಾರದ ಪುಸ್ತಕ ವಿತರಿಸುತ್ತಿದ್ದು ಕ್ರಿಶ್ಚಿಯನ್ ಮತಪ್ರಚಾರದಲ್ಲಿ ತೊಡಗಿದ್ದ ೧೫ ಜನರ ತಂಡವನ್ನು ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಯ ಸದಸ್ಯರು ಕಾರವಾರ ನಗರ ಪೊಲೀಸರ ವಶಕ್ಕೆ ನೀಡಿದ ಘಟನೆ ವರದಿಯಾಗಿದೆ.
ಮತ ಪ್ರಚಾರದ ಹಿಂದೆ ಮತಾಂತರದ ಕರಿನೆರಳು ಇರಬಹುದೇ ಎಂಬ ಬಗ್ಗೆ ಸ್ಥಳೀಯರು ಕೆಲಕಾಲ ಗೊಂದಲಗೊಂಡರು.
ಕಾರವಾರದಲ್ಲಿ ಕೆಲವರು ಹಿಂದು ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕ್ರಿಶ್ಚಿಯನ್ ಧರ್ಮದ ಪರವಾಗಿ ಪ್ರಚಾರ ಮಾಡಿದ್ದು ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಕಾರವಾರ ನಗರಠಾಣೆ ಪೊಲೀಸರ ವಶಕ್ಕೆ ನೀಡಿದ್ದು ಪೊಲೀಸರು ಯುವಕರ ವಿಚಾರಣೆ ನಡೆಸಿ ಬಿಡುಗಡೆ ಗೊಳಿಸಿದ್ದಾರೆ.