ಅಂಕೋಲಾ: ಅಂಕೋಲಾ ತಾಲೂಕಾ ಪಂಚಾಯತ ಕಾರ್ಯಾಲಯ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ನಾಗಾಂಜಲಿ ಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
2018-19 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ ಶೇ.100 ರಷ್ಟು ಸಾಧನೆ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ನಾಗಾಂಜಲಿ ಪರಮೇಶ್ವರ ನಾಯ್ಕ ರವರನ್ನು ಸ್ವಾಮಿ ವಿವೇಕಾನಂದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ (ರಿ )ಅಂಕೋಲಾ ಇವರ ವತಿಯಿಂದ ಸನ್ಮಾನಿಸಲಾಯಿತು .
ಕಾರ್ಯಕ್ರಮ ಉದ್ಘಾಟಿಸಿ , ಸನ್ಮಾನಿಸಿ ಮಾತನಾಡಿದ ನಾಡಿನ ಹೆಸರಾಂತ ಸಾಹಿತಿ ವಿಷ್ಣು ನಾಯ್ಕ ನಮ್ಮ ಪ್ರತಿಭೆಗಳು ನಮ್ಮ ದೇಶದಲ್ಲಿಯೇ ಬೆಳೆಯಬೇಕು ಆ ಮೂಲಕ ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಬೇಕು ಎಂದು ಸಂದೇಶ ನೀಡಿದರು .
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿ ಆರ್ಥಿಕ ಅಗತ್ಯತೆ ಇರುವ ಉತ್ತರ ಕನ್ನಡ ಜಿಲ್ಲೆಯ ಆಯ್ದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು
ಟ್ರಸ್ಟ್ ನ ಅಧ್ಯಕ್ಷ ಎಲ್.ಕೆ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಶಿಕ್ಷಕರಾದ ಎಂ.ಎಂ.ಕರ್ಕಿಕರ , ಅರಣ್ಯಸಂರಕ್ಷಣಾಧಿಕಾರಿ ಉದಯ್ ಡಿ ನಾಯಕ್ ಉಪಸ್ಥಿತರಿದ್ದರು.