ಕಾರವಾರ : ದೇಶಪಾಂಡೆ ಮನಸ್ಸಿನಿಂದ ಕೆಲಸ ಮಾಡಿದ್ರೆ ನಾನೂ ಗೆಲ್ತಿದ್ದೆ..! ಎಂದು ಆನಂದ ಅಸ್ನೋಟಿಕರ್ ತಮ್ಮ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ಜೆಡಿಎಸ್ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್, ಬಿಜೆಪಿ ಮತಗಳು ಒಂದಾಗಿ ನಮಗೆ ಹಿನ್ನಡೆಯಾಯಿತು. ಅಲ್ಲದೇ, ತನಗೂ ಒಂದು ತಿಂಗಳ ಮುಂಚೆಯೇ ಟಿಕೇಟ್ ಕೊಡಬೇಕಿತ್ತು. ಒಂದು ವೇಳೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಸಚಿವ ದೇಶಪಾಂಡೆ ಮನಸ್ಸಿನಿಂದ ಕೆಲಸ ಮಾಡಿದಿದ್ದರೆ ಗೆಲ್ಲಬಹುದಿತ್ತು. ಆದರೆ ದೇಶಪಾಂಡೆ ಮನಸ್ಸಿನಿಂದ ಕೆಲಸ ಮಾಡದ ಪರಿಣಾಮ, ಗಟ್ಟಿಯಾಗಿ ನಿಲ್ಲದ ಪರಿಣಾಮ ಚುನಾವಣೆಯಲ್ಲಿ ಕಷ್ಟವಾಯಿತು ಅಂತಾ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಅದೇ ರೀತಿ ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿ ಸೋಲುತ್ತಿರಲಿಲ್ಲ ಅಂತಾ ಕಾರವಾರದಲ್ಲಿ ಜೆಡಿಎಸ್ ಮುಖಂಡ ಹಾಗೂ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.