ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಕುಕ್ಕನೀರ ಕ್ರಾಸ್ ಹತ್ತಿರ ಶಿರಾಲಿಯಿಂದ ಕರಿಕಲ್ ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ನಡೆದಿದ್ದು ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬೈಕ್‌ಬಸ್ ನ ಕೆಳಗೆ ಸಿಲುಕಿದ್ದು ನುಜ್ಜುಗುಜ್ಜಾಗಿದೆ. ಅಪಘಾತ ದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬಂದರ ವ್ಯಾಪ್ತಿಯ ಕರಿಕಲ್ ನಿವಾಸಿ ವೆಂಕಟೇಶ ಲಕ್ಷಣ ಮೋಗೇರ ಎಂದು ಗುರುತಿಸಲಾಗಿದೆ .
ಮೃತ ಯುವಕ ಶಿರಾಲಿಯಿಂದ ಕರಿಕಲ್ ಮನೆ ಕಡೆಗೆ ಸಾಗುತ್ತಿದ್ದ ವೇಳೆ ಅತಿ ವೇಗವಾಗಿ ಮಂಗಳೂರು ನಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.