ಮೇಷ:- ಹಲವಾರು ಯೋಜನೆಗಳನ್ನು ಕೈಬಿಟ್ಟು ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡಲ್ಲಿ ಸಿದ್ಧಿಗೆ ಅನುಕೂಲವಾಗುವುದು. ಪರಾಕ್ರಮ ರಾಹು ಸಂಚಾರದಿಂದಾಗಿ ಸಂವಹನ ಕಾರ್ಯದಲ್ಲಿ ಹಿನ್ನಡೆ ಉಂಟಾಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು.
ವೃಷಭ:- ನಿಯೋಜಿಸಿಕೊಂಡ ಪ್ರವಾಸ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಬೇಕಾಗುವುದು. ಬಂಧು ಬಳಗದವರು ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸುವ ಸಾಧ್ಯತೆ ಇದೆ. ಆದರೆ ಅದಕ್ಕೂ ಪ್ರಮುಖವಾದ ಕಾರ್ಯ ಹಮ್ಮಿಕೊಳ್ಳಬೇಕಾಗಿರುವುದರಿಂದ ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿ.
ಮಿಥುನ:- ಜೀವನದಲ್ಲಿ ಮಹತ್ವದ ದಿನಗಳು ಹಲವಾರು ಇರುತ್ತವೆ. ಅಂತೆಯೇ ಇಂದು ಮಹತ್ವದ ಸಾಧನೆಯೊಂದನ್ನು ನಡೆಸಲು ದೈವದ ಸಹಾಯ ದೊರೆಯುವುದು. ಇದರಿಂದ ಸಮಾಜದಲ್ಲಿ ಗೌರವ ಆದರಗಳನ್ನು ಪಡೆಯುವಿರಿ.
ಕಟಕ:- ತಲೆ ತಿನ್ನುವ ಜನರನ್ನು ಹತ್ತಿರ ಬರದಂತೆ ಉಪಾಯದಿಂದ ಸಾಗಹಾಕುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಮುದ ನೀಡುವುದು. ದುರ್ಗಾದೇವಿ ಆರಾಧನೆ ಮಾಡುವುದು ಒಳ್ಳೆಯದು. ಕೆಲವರಿಗೆ ದೂರದ ಊರಿನ ಪ್ರಯಾಣ ಸಾಧ್ಯತೆ ಇದೆ.
ಸಿಂಹ:- ನಿಮಗೆ ಜಾಣತನವಿದೆ. ಆದರೆ ಅವಸರಿಸದಿರಿ. ಸಾವಧಾನವೇ ನಿಮಗೆ ವಜ್ರಾಯುಧ. ನಿಮ್ಮ ಮುಂದಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಮಕ್ಕಳು ನಿಮ್ಮ ಆಜ್ಞೆಯನ್ನು ಪಾಲಿಸುವರು.
ಕನ್ಯಾ:- ಮನಸ್ಸಿನ ಹಲವು ಹೊಯ್ದಾಟಗಳನ್ನು ನಿಯಂತ್ರಿಸಿಕೊಂಡಲ್ಲಿ ಒಳಿತಾಗುವುದು. ಕೇವಲ ವಾದ ವಿವಾದದ ಜ್ಞಾನವು ನಿತ್ಯ ಜೀವನಕ್ಕೆ ಬಾರದೇ ಹೋಗುವ ಸಾಧ್ಯತೆ ಇದೆ. ತಪ್ಪದೇ ವಿಷ್ಣು ಸಹಸ್ರನಾಮ ಮತ್ತು ಆಂಜನೇಯ ಸ್ತೋತ್ರ ಪಠಿಸಿ.
ತುಲಾ:- ಹಣಕಾಸಿನ ಕುರಿತು ಗಮನವಿರಲಿ. ಸುಮ್ಮನೆ ಖರ್ಚಿನ ಹಾದಿ ವಿಸ್ತಾರಗೊಳ್ಳುವುದು. ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ ಹಣಕಾಸಿನ ಜೋಡಣೆಯನ್ನು ಮಾಡಿಕೊಳ್ಳುವಿರಿ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.
ವೃಶ್ಚಿಕ:- ಕೆಲಸದ ಸ್ಥಳದಲ್ಲಿ ಕೆಲವು ಕಹಿ ಅನುಭವಗಳನ್ನು ಎದುರಿಸಬೇಕಾಗುವುದು. ಹಾಗಂತ ನಿಮ್ಮ ಆತ್ಮಸಾಕ್ಷಿಗೆ ವಿರೋಧವಾಗಿ ನಡೆದುಕೊಳ್ಳದಿರಿ. ದಶರಥ ಕೃತ ಶನಿಸ್ತೋತ್ರ ಪಠಿಸಿ. ಹಣಕಾಸು ವ್ಯವಹಾರವನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಿ.
ಧನುಸ್ಸು:- ಶಕ್ತಿ ಸಂವರ್ಧನೆಗೆ, ಸಿದ್ಧಿಗೆ ಮತ್ತು ಉದ್ದೇಶಗಳನ್ನು ಸಾಧಿಸಿಕೊಳ್ಳಲು ಗುರು ಹಿರಿಯರ ಆಶೀರ್ವಾದ ಪಡೆಯುವಿರಿ. ಬಡವರಿಗೆ ಆಹಾರ ನೀಡಿ ಮತ್ತು ಕಾಲು ಕೇಜಿ ಕಡಲೆಕಾಳನ್ನು ದಾನ ಮಾಡಿ. ಇಲ್ಲವೆ ಹಸುವಿಗೆ ನೀಡಿ.
ಮಕರ:- ನಿಮಗೆ ದೈವಾನುಕೂಲ ಇರುವ ಕಾರಣ ಮಹತ್ವವಾದ ಒಂದು ಕಾರ್ಯವನ್ನು ಸಾಧಿಸುವಿರಿ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು, ಬಂಧುಗಳು ನಿಮ್ಮ ಸ್ನೇಹಕ್ಕಾಗಿ ನಿಮ್ಮ ಬಳಿ ಬರುವರು. ಈ ಬಗ್ಗೆ ನಿಮ್ಮ ಸಂಗಾತಿಯ ಸಲಹೆಯಂತೆ ನಡೆಯಿರಿ.
ಕುಂಭ:- ಸಕಾರಾತ್ಮಕ ಚಿಂತನೆಗಳ ಜತೆಗೆ ಬಂಧುಗಳ, ಸಂಬಂಧಿಗಳ ಬೆಂಬಲದಿಂದ ಹಮ್ಮಿಕೊಂಡ ಎಲ್ಲಾ ವಿಚಾರಗಳಲ್ಲೂ ಯಶಸ್ಸು ಹೊಂದುವಿರಿ. ಆಂಜನೇಯ ಮಂತ್ರವನ್ನು ಆದಷ್ಟು ಹೆಚ್ಚಿಗೆ ಪಾರಾಯಣ ಮಾಡಿ.
ಮೀನ:- ಜನರಿಗೆ ಸಹಾಯ ಮಾಡುವ ನಿಮ್ಮ ಮನೋಭಾವದಿಂದಾಗಿ ಎಲ್ಲಾ ರೀತಿಯ ಶ್ಲಾಘನೆ ಪಡೆಯುವಿರಿ. ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಳ್ಳಬಲ್ಲರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.