ಶಿರಸಿ: ಚುನಾವಣೆ ಮುಗಿದಂದಿನಿಂದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹಾಗೂ ಆರ್ ವಿ ದೇಶಪಾಂಡೆ ನಡುವಿನ ಒಳ ಬಿಕ್ಕಟ್ಟು ಸ್ಪೋಟಗೊಳ್ಳುತ್ತಿದೆ.
ಉತ್ತರ ಕನ್ನಡ ಲೋಕಸಭಾ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ’ದೇಶಪಾಂಡೆ ನನ್ನ ಪರವಾಗಿ ಮನಸ್ಸಿಟ್ಟು ಕೆಲಸ ಮಾಡಿದ್ದರೆ ಗೆಲ್ಲುತ್ತಿದ್ದೆ’ ಎಂದು ತನ್ನ ಸೋಲಿಗೆ ಆರ‍್ವಿಡಿಯವರನ್ನು ದೋಷಿಸಿದ್ದರು.
ಇದೀಗ ಆನಂದ ಅ್ನೋಟಿಕರ್ ವಿರುದ್ಧ ಕಾಂಗ್ರೆಸಿಗರು ತಮ್ಮ ಮಾತಿನ ದಾಟಿ ಬದಲಿಸಿದ್ದಾರೆ. ಆನಂದ ಹೇಳಿಕೆ ಬಗ್ಗೆ ಮಾತನಾಡಿರುವ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆಶ್ವರ್ಯದ ಜೊತೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಅಸ್ನೋಟಿಕರ್ ಅವರನ್ನು ಆಯ್ಕೆ ಮಾಡಿ ಕಣಕ್ಕಿಳಿಸುವ ತಯಾರಿ ಪ್ರಾರಂಭವಾದಾಗಿನಿಂದಲೂ ಆರ‍್ವಿಡಿ ಜಿಲ್ಲೆಯಾದ್ಯಂತ ಇವರ ಪರವಾದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಜೊತೆಯಲ್ಲಿ ಕಾಂಗ್ರೆಸ್‌ನ ಎಲ್ಲ ಪದಾಧಿಕಾರಿ, ಶಾಸಕರು, ಕಾರ್ಯಕರ್ತರಿಗೆಲ್ಲರಿಗೂ ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಸಲಹೆ- ಸೂಚನೆಗಳನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಟಿಕೇಟ್ ಇಲ್ಲದೆ ಮೈತ್ರಿಯಿಂದ ಆನಂದ್ ಅನ್ನುವುದನ್ನೇ ಅರಿತು ಪ್ರಚಾರ ಕಾರ್ಯದಲ್ಲಿ ತೊಡಗಿದರೂ ಆನಂದನಿಂದ ಈಗ ತಕ್ಕ ಉತ್ತರ ದೊರಕಿದೆ. ಜನತೆ ನೀಡಿದ ಫಲಿತಾಂಶಕ್ಕೆ ತಲೆ ಬಾಗದೆ, ತನ್ನ ಸೋಲನ್ನು ಮತ್ತೊಬ್ಬರ ತಲೆಗೆ ಕಟ್ಟುವುದು ಎಷ್ಟರ ಮಟ್ಟಿಗೆ ಸರಿ.? ಇದರಿಂದ ಹಿರಿಯ ಮುಖಂಡ ಆರ‍್ವಿಡಿಗೆ ಹಾಗೆಯೇ ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಅವಮಾನ ಮಾಡಿದಂತಾಗಿದೆ. ಚುನಾವಣೆಯಲ್ಲಿ 3 ಲಕ್ಷದಷ್ಟು ಮತಗಳನ್ನು ಪಡೆಯುವಲ್ಲೂ ಆರ‍್ವಿಡಿಯವರ ಪ್ರಯತ್ನವಿದೆ. ಅದನ್ನೆಲ್ಲ ಮರೆತು ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ ಆನಂದ ತಮ್ಮ ಮಾತಿನ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಭೀಮಣ್ಣ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.