ಕುಮಟಾ: ವಿದ್ಯಾನಿಕೇತನ ಪ್ರಗತಿ ವಿದ್ಯಾಲಯ ಮೂರೂರು ಇದರ ನೂತನ ಕಟ್ಟಡಕ್ಕೆ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ, ಶಾಲಾ ಪ್ರಾರಂಭೋತ್ಸವ, ಪ್ರತಿಭಾ ಪುರಸ್ಕಾರ, ಪೂರ್ವ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭವು ಮೂರೂರು ಪ್ರಗತಿ ವಿದ್ಯಾಲಯದಲ್ಲಿ ಮೇ.29 ಬುಧವಾರ ಜರುಗಲಿದೆ.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಅಭ್ಯಾಗತರಾಗಿ ಶಾಸಕ ದಿನಕರ ಕೆ.ಶೆಟ್ಟಿ ಹಾಗೂ ಇಸ್ರೋ ಬೆಂಗಳೂರಿನ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ವಿಜ್ಞಾನಿಗಳಾದ ಪಿ.ಜೆ.ಭಟ್ಟ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ಶ್ರೀಗಳ ಪಾದಪೂಜೆ, ಶ್ರೀಗುರುಭಿಕ್ಷಾ ಹಾಗೂ ಮಧ್ಯಾಹ್ನ 12 ಕ್ಕೆ ನೂತನ ಕಟ್ಟಡಕ್ಕೆ ಅನುಗ್ರಹ ಮಂತ್ರಾಕ್ಷತೆ, ಬಳಿಕ ಸಭಾ ಕಾರ್ಯಕ್ರಮ ಜರುಗಲಿದೆ.