ಕುಮಟಾ: ಒಂದು ಕಡೆ ಉರಿ ಬಿಸಿಲು, ನೀರಿನ ಬವಣೆ ಇವುಗಳ ನಡುವೆಯೂ ಉತ್ಸಾಹದಿಂದ ಎಂಟನೆ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಶುಭಾಗಮನ. ತಳಿರು ತೋರಣಾಲಂಕಾರ. ಕಳೆದ ಸಾಲಿನ ರ್ಯಾಂಕ್ ವಿಜೇತರ ಸ್ವಾಗತ ಕಮಾನು! ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭದ ಮೊದಲ ದಿನ ಕಂಡುಬಂದ ದ್ರಶ್ಯ! ಕೆನರಾ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಸಿಹಿ ವಿತರಿಸಿ ಸ್ಪೂರ್ತಿ ತುಂಬಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಹಾಗೂ ಸಹ ಶಿಕ್ಷಕವೃಂದದವರು ನೂರಕ್ಕೂ ಅಧಿಕ ಸಂಖ್ಯೆಯ ಹೊಸ ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡರು.

RELATED ARTICLES  ಈರುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ

ತಮ್ಮ ಶಾಲೆಯ ಶಿಕ್ಷಕವರ್ಗದವರನ್ನು ಪರಿಚಯಸಿದ್ದಲ್ಲದೇ ಶಾಲಾ ಸಾಧನೆಗಳನ್ನು ಪ್ರಸ್ತುತ ಪಡಿಸಲಾಯಿತು. ಕನ್ನಡ ಮಾಧ್ಯಮದ ಅಪೂರ್ವ ಸತತ ಸಾಧನೆಗೆ ಗಮನಾರ್ಹ ಪ್ರವೇಶಾತಿ ಎದ್ದುಕಾಣುತ್ತಿತ್ತು. ಮಕ್ಕಳ ಖುಷಿ. ಹಿಗ್ಗು ಸಹಪಾಠಿಗಳೊಂದಿಗಿನ ಸಲುಗೆಗೆ ಸಾಕ್ಷಿಯಾಗಿತ್ತು.

RELATED ARTICLES  ಶ್ರೀ ಶಾಂತಿಕಾ ಪರಮೇಶ್ವರಿ ಅಂಗಳದಲ್ಲಿ: ಮೊದಲ ದಿನದ ಸಾಂಸ್ಕøತಿಕ ಸಂಚಿ ಅನಾವರಣ ನವ ವಿಧ ಭಕ್ತಿ ಸ್ಪುರಣ: ನಾದ, ನೃತ್ಯ, ಯಕ್ಷ ವೈಭವ