ಕುಮಟಾ : ಚಂದ್ರಶೇಖರ ಗೌಡ ಕತಗಾಲ 2019ರ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3, 200 ರ್ಯಾಂಕ್ ಪಡೆದು ಕುಮಟಾ ತಾಲೂಕಿಗೆ ಕೀರ್ತಿ ತಂದಿದ್ದಾನೆ. ದ್ವಿತೀಯ ಪಿಯುಸಿ ಸೈನ್ಸ್ ಪರೀಕ್ಷೆಯಲ್ಲಿ ಕೂಡ ಶೇಕಡಾ 92 ಅಂಕಗಳನ್ನು ಪಡೆದಿದ್ದಲ್ಲದೆ ಗಣಿತದಲ್ಲಿ ನೂರಕ್ಕೆ ನೂರು ಭೌತಶಾಸ್ತ್ರದಲ್ಲಿ 97 ರಸಾಯನಶಾಸ್ತ್ರದಲ್ಲಿ 95 ಅಂಕಗಳನ್ನು ಪಡೆದುಕೊಂಡಿದ್ದಾನೆ. ಈತನ ಯಶಸ್ವಿಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

   ಈತ ಕುಮಟಾದ ಖ್ಯಾತ ಕೋಚಿಂಗ್ ಸೆಂಟರ್ ಪ್ರಗತಿ ಟ್ಯುಟೋರಿಯಲ್ಸ್ ನಲ್ಲಿ ವಿಶೇಷ ತರಬೇತಿಯನ್ನು ಎಂ ಜಿ ಭಟ್ಟರ ಮಾರ್ಗದರ್ಶನದಲ್ಲಿ ಪಡೆದಿದ್ದನು. ಕುಮಟಾದ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲಿ ಕೇರಿಯಲ್ಲಿ ಓದಿದ್ದು ಪ್ರಗತಿ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿಯನ್ನು ಪಡೆದು ಈ ಸಾಧನೆ ಮಾಡಿದ್ದಕ್ಕೆ ತುಂಬಾ ಖುಷಿ ಎನಿಸಿದೆ ಎಂದು ಪ್ರಗತಿ ಟುಟೋರಿಯಲ್ ಪ್ರಾಂಶುಪಾಲ ಎಂಜಿ ಭಟ್ ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಪ್ರತಿವರ್ಷವೂ ಅತ್ಯಂತ ಉತ್ತಮ ಫಲಿತಾಂಶ ಬರುತ್ತಿದ್ದು ಅದಕ್ಕೆ ನಮ್ಮಲ್ಲಿ ಕಲಿಸುವ ಉಪನ್ಯಾಸಕರುಗಳ ವಿಶೇಷ ಕಾಳಜಿಗೆ ಕಾರಣ ಎಂದಿದ್ದಾರೆ. ಅಲ್ಲದೇ ಈ ವರ್ಷದಿಂದ ವಿದ್ಯಾರ್ಥಿಗಳ ಹಾಗೂ ಪಾಲಕರ ಅಭಿಪ್ರಾಯದ ಮೇರೆಗೆ ಉಡುಪಿ ಮಂಗಳೂರು  ಯಲ್ಲಾಪುರ ಹಾಗೂ ಶಿರಸಿಯ ಖ್ಯಾತ ಉಪನ್ಯಾಸಕರು ಗಳನ್ನ ಕರೆಯಿಸಿ ಅವರಿಂದ ವಿಶೇಷ ತರಬೇತಿಯನ್ನು ಕೂಡ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಎಂದು ತಿಳಿಸಿದರು ಅಲ್ಲದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೂರದ ಕಾಲೇಜುಗಳಲ್ಲಿ ಓದಿಸುವ ಮತ್ತು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓಡಿಸುವವರ ಮಧ್ಯ ಈ ಸಾಧನೆ ಗಮನಾರ್ಹವಾದುದು. ಓದಬೇಕೆಂಬ ಛಲ ಮಕ್ಕಳಲ್ಲಿ ಇರಬೇಕು ಆಗಲೇ ಉಪನ್ಯಾಸಕರ ಶ್ರಮ ಸಾರ್ಥಕವಾಗುವುದು. ಈಗಾಗಲೇ ಪಿಯುಸಿ ಪ್ರಥಮ ವರ್ಷದ ಸೈನ್ಸ್ ಕಾಮರ್ಸ್ ಹಾಗೂ ಆರ್ಟ್ಸ್ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಗಳು ಆರಂಭವಾಗಿದ್ದು ಆಸಕ್ತರು ಕೂಡಲೇ ಸಂಪರ್ಕಿಸಬೇಕೆಂದು ಪ್ರಗತಿ ಕೋಚಿಂಗ್ ಸೆಂಟರ್ ಪ್ರಾಂಶುಪಾಲ ಎಂಜಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಇಹ ಲೋಕ ತ್ಯಜಿಸಿದ 'ಬದುಕಲು ಕಲಿಯಿರಿ' ಕೃತಿ ಕರ್ತೃ ಸ್ವಾಮಿ ಜಗದಾತ್ಮನಂದಜೀ!

ಸಂಪರ್ಕಿಸಿ:.. ಪ್ರಗತಿ ಟುಟೋರಿಯಲ್. ಬೆಂಗಳೂರು ಬೇಕರಿ ಪಕ್ಕ. ಹಳೆ ಬಸ್ ಸ್ಟಾಂಡ್. ಕುಮಟಾ. ಮೊಬೈಲ್;9480667585……………………….(.08386)223236….. ಹಾಗೂ ಶ್ರೀ ಆರ್ ಎನ್. ನಾಯಕ್ ಕಂಪೌಂಡ್ ಬಿ ಇ ಓ ಆಫೀಸ್ ಹತ್ತಿರ.. ಹೊನ್ನಾವರ

RELATED ARTICLES  ಅಕ್ರಮಗಳನ್ನು ತಡೆಯಲು ಉತ್ತರ ಕನ್ನಡ ಜಿಲ್ಲಾಡಳಿತ ಮತ್ತಷ್ಟು ಕ್ರಮ: ಜಾರಿಯಾದ ಮಾದರಿ ನೀತಿ ಸಂಹಿತೆ.