ಕಾರವಾರ: ಈಗ ಎಲ್ಲಿ ನೋಡಿದರೂ ಮೋದಿಯವರ ಗುಣ ಗಾನ, ಮೋದಿ ಅಭಿಮಾನಿಗಳು ಇಂದು ಸಂತಸ ಹಂಚಿಕೊಳ್ಳಲು ವಿವಿಧ ಮಾರ್ಗ ಅನುಸರಿಸುತ್ತಿದ್ದಾರೆ. ಆದರೆ ಕಾರವಾರದ ಈತ ಸಾರ್ವಜನಿಕರಿಗೆ ಕಬ್ಬಿನ ಹಾಲನ್ನ ಉಚಿತವಾಗಿ ನೀಡಿ ಅಭಿಮಾನ ತೋರಿದ್ದಾನೆ.
ನರೇಂದ್ರ ಮೋದಿಯವರು ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಡುತ್ತಿದ್ದು ಇಡಿ ದೇಶವೇ ಸಂಭ್ರಮಿಸುತ್ತಿದೆ ಈ ಹಿನ್ನಲೆಯಲ್ಲಿ ಕಾರವಾರದಲ್ಲಿ ಮೋದಿ ಅಭಿಮಾನಿ ಸಾರ್ವಜನಿಕರಿಗೆ ಕಬ್ಬಿನ ಹಾಲನ್ನ ಉಚಿತವಾಗಿ ನೀಡಿ ಅಭಿಮಾನ ಮೆರೆದಿದ್ದಾರೆ.
ಕಾರವಾರದ ಗ್ರೀನ್ ಸ್ಟ್ರೀಟ್ ನಲ್ಲಿ ಈ ಸೇವೆ ನಡೆಯುತ್ತಿದೆ ಪ್ರಧಾನಿ ಮೋದಿ ಅಭಿಮಾನಿ ಪ್ರಶಾಂತ ಪೆಡ್ನೇಕರ್ ಜ್ಯೂಸ್ ವಿತರಣೆ ಮಾಡಿ ಅಭಿಮಾನ ಮೆರೆದಿದ್ದಾನೆ.ಪ್ರಶಾಂತ ಪೆಡ್ನೇಕರ್ ಪ್ರಧಾನಿ ಮೋದಿಯವರ ಅಪ್ಪಟ್ಟ ಅಭಿಮಾನಿಯಾಗಿದ್ದು ಕಬ್ಬಿನ ಹಾಲಿನ ಅಂಗಡಿಯನ್ನಿಟ್ಟು ವ್ಯಾಪಾರ ನಡೆಸುತಿದ್ದಾರೆ.ಮೋದಿ ಕಳೆದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು ಈ ಬಾರಿ ಸಹ ಒಳ್ಳೆಯ ಸಾಧನೆ ಮಾಡುವ ಜೊತೆಗೆ ಬೀದಿ ಬದಿಯ ಬಡ ವ್ಯಾಪಾರಿಗಳಿಗೂ ಅನುಕೂಲ ಮಾಡಿಕೊಡುತ್ತಾರೆ ಎನ್ನುವ ನಂಬಿಕೆ ಇವರದ್ದು.