ಶಿರಸಿ: ತಾಲೂಕಿನ ಮಂಜಳ್ಳಿಯಲ್ಲಿ ಪ್ಲಾಸ್ಟಿಕ್ ತಿಂದು ಸಾಯುವ ಸ್ಥಿತಿಯಲ್ಲಿದ್ದ ಎಮ್ಮೆಯ ಹೊಟ್ಟೆಯಿಂದ ಪ್ಲಾಸ್ಟಿಕ್ ಹೊರತೆಗೆದು ಎಮ್ಮೆಯ ಜೀವ ಉಳಿಸಿದ ಘಟನೆ ವರದಿಯಾಗಿದೆ.

    ರಸ್ತೆ ಬದಿಗಳಲ್ಲಿ ಹಾಕುವ ಪ್ಲಾಸ್ಟಿಕ್ ಗಳನ್ನು ತಿಂದು ಜೀವನ್ಮರಣದ ಸ್ಥಿತಿಯಲ್ಲಿದ್ದ ಎಮ್ಮೆ ಮಣಕದ ಹೊಟ್ಟೆಯಿಂದ ಶಸ್ತ್ರ ಚಿಕಿತ್ಸೆಯ ಮೂಲಕ ಬರೋಬ್ಬರಿ 80 ಕೆಜಿ ಪ್ಲಾಸ್ಟಿಕನ್ನು ಹೊರತೆಗೆಯಲಾಗಿದೆ.

RELATED ARTICLES  ಕುಮಟಾ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ.

      ಮಂಜಳ್ಳಿಯ ಶೇಶು ದೇವಡಿಗ ಎಂಬುವರ ಮನೆಯ 8 ತಿಂಗಳ ಗರ್ಭಿಣಿ ಎಮ್ಮೆ ಮಣಕದ ಹೊಟ್ಟೆಯಲ್ಲಿದ್ದ ಬೃಹತ್ ಪ್ರಮಾಣದ ಪ್ಲಾಸ್ಟಿಕನ್ನು ಚಿಕಿತ್ಸೆಯ ಮೂಲಕ ಪಶು ವೈದ್ಯ ಡಾ.ಪಿ.ಎಸ್.ಹೆಗಡೆ ಹೊರತೆಗೆದಿದ್ದಾರೆ.

RELATED ARTICLES  “ಬ್ಯಾಂಕೊ ಪುರಸ್ಕಾರ್- 2017” ಪ್ರಶಸ್ತಿಗೆ ಭಾಜನವಾಗಿದೆ ಭಟ್ಕಳ ಅರ್ಬನ್‍ಕೋ-ಆಪರೇಟಿವ್ ಬ್ಯಾಂಕ್

    ಹೊಟ್ಟೆಯನ್ನು ಕೊರೆದು 4 ಗಂಟೆಗೂ ಅಧಿಕ ಕಾಲ ಶಸ್ತ್ರ ಚಿಕಿತ್ಸೆ ನೀಡಿ ಎಮ್ಮೆಯನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.