ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ದಿನಕರ್ ಕೆ ಶೆಟ್ಟಿ ಯವರು   ಇಂದು ಕುಮಟಾ ತಾಲೂಕು ಪಂಚಾಯತ ಸಭಾ ಭವನದಲ್ಲಿ  ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಪಲಾನುಭವಿಗಳಿಗೆ ಭಾಗ್ಯಲಕ್ಷ್ಮಿ  ಬಾಂಡ್ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರ ಫಲಾನುಭವಿಗಳಿಗೆ ಬಲೆ ವಿತರಣೆ ಮಾಡಿದರು.

RELATED ARTICLES  ಹಿರೇಗುತ್ತಿ ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸೆಕೆಂಡರಿ ಹೈಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕರು “ಹೆಣ್ಣು ಮಗು ಹುಟ್ಟಿದರೆ ಶಾಪ”  ಅನ್ನುವವರಿಗೆ ಹಾಗೂ ಹೆಣ್ಣು ಭ್ರೂಣಹತ್ಯೆ ತಡೆಯಲು ” ಭಾಗ್ಯಲಕ್ಷಿ ಬಾಂಡ್” ಯೋಜನೆ ಜಾರಿ ಮಾಡಿದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯುರಪ್ಪ ರವರ ಸಾಧನೆಯನ್ನು ವಿವರಿಸಿದರು.

    ಸಭಾ ಕಾರ್ಯಕ್ರಮದ ವೇದಿಕೆ ಯಲ್ಲಿ ತಾ.ಪಂ ಅಧ್ಯಕ್ಷರಾದ ಶ್ರೀಮತಿ ವಿಜಯಾ ಪಟಗಾರ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರತ್ನಾಕರ್ ನಾಯ್ಕ, ತಾ.ಪಂ ಸದಸ್ಯರಾದ ಶ್ರೀ ಅನುಸೂಯಾ ಅಂಬಿಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಮುಖ್ಯಾಧಿಕಾರಿ ಶ್ರೀಮತಿ ತ್ರಿವೆಣಿ ಯಾಜಿ ಯವರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

RELATED ARTICLES  ಟೋಲ್ ಗೇಟ್ ನ ಸಿಬ್ಬಂದಿಯ ಮೇಲೆ ಹಲ್ಲೆ..?