ಮೇಷ:- ಹೊಂಚು ಹಾಕಿ ನಿಮ್ಮ ಯೋಜನೆಗಳನ್ನು ವಿಫಲಗೊಳಿಸುವ ದುಷ್ಟರನ್ನು ಎಚ್ಚರದಿಂದ ದೂರಮಾಡಿ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಜೀವನ ಅಷ್ಟೇನು ಸುಖದಾಯಕವಾಗಿರುವುದಿಲ್ಲ. ಆದರೂ ಹೋರಾಟ ಅನಿವಾರ್ಯವಾಗಿರುತ್ತದೆ.


ವೃಷಭ:- ಅವಶ್ಯವಾಗಿ ಮನಸ್ಸಿನ ಒತ್ತಡಗಳನ್ನು ಎದುರಿಸುವ ಮನೋದಾಢ್ರ್ಯತೆ ತೋರಬೇಕು. ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಸಂಗಾತಿಯು ಸಹ ನಿಮ್ಮೊಡನೆ ಪ್ರೀತಿ ವಾತ್ಸಲ್ಯದಿಂದಿರುವರು.


ಮಿಥುನ:- ಹಿರಿಯರು ಅಥವಾ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು. ಅವಸರಿಸದೇ ಚಿಕಿತ್ಸೆ ಕೊಡಿಸಿ. ಶಿರೋವೇದನೆ ಮತ್ತು ಕಣ್ಣಿನ ತೊಂದರೆ ಎದುರಾಗುವ ಸಾಧ್ಯತೆ ಇದ್ದು , ಸೂರ್ಯಭಗವಾನನನ್ನು ಅವಶ್ಯವಾಗಿ ಪ್ರಾರ್ಥಿಸಿ. ಒಳಿತಾಗುವುದು.

ಕಟಕ:- ಸ್ವತಂತ್ರವಾದ ನಿರ್ಧಾರ ತಳೆಯುವಿರಿ. ಸಫಲತೆಗಾಗಿನ ನಿಮ್ಮ ಪ್ರಯತ್ನಗಳಿಗೆ ಗಟ್ಟಿತನ ದೊರೆಯಲಿದೆ. ಇದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಸಿಂಹ:- ಸುಗಮವಾಗಿ ನಡೆಯುವ ಕೆಲಸ ಕಾರ್ಯಗಳಿಗೆ ಕೆಲ ಗೆಳೆಯರೇ ಅಡ್ಡಿ ಮಾಡುವ ಸಂದರ್ಭವಿದೆ. ಈ ಬಗ್ಗೆ ಎಚ್ಚರದಿಂದ ಇರಿ. ಮಗನ ಜೀವನ ಸುಖಾಂತ್ಯ ತಲುಪಿರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.

RELATED ARTICLES  ಐಎಂಎ ಹಗರಣ: ಬಹುಕೋಟಿ ವಂಚಕ ‘ಮನ್ಸೂರ್ ಖಾನ್’ ಬಂಧನ.!

ಕನ್ಯಾ:- ಕೆಲವು ಸಂಕಷ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುವುದು. ದುರ್ಗಾದೇವಿ ಮತ್ತು ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಹಣಕಾಸಿನ ಪರಿಸ್ಥಿತಿಯು ಸಾಧಾರಣವಾಗಿರುತ್ತದೆ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.

ತುಲಾ:- ಕೆಲಸ ಕಾರ್ಯಗಳಲ್ಲಿ ಶಿಸ್ತು ರೂಢಿಸಿಕೊಳ್ಳುವುದು ಒಳಿತು. ನಿಮ್ಮ ಪಾರದರ್ಶಕ ವ್ಯಕ್ತಿತ್ವಕ್ಕೆ ವಿಶೇಷ ಪ್ರಶಂಸೆ ದೊರೆಯುವುದು. ಆದಾಗ್ಯೂ ಕುಲದೇವರನ್ನು ಸ್ಮರಿಸಿ.

ವೃಶ್ಚಿಕ:- ಇದು ಉತ್ತಮ ಕಾಲವಲ್ಲ ಎಂದು ಮೀನ ಮೀಷ ಎಣಿಸದಿರಿ. ಸರ್ವಕಾಲವೂ ಪುಣ್ಯಕಾಲವು, ಸರ್ವದೇಶವೂ ಪುಣ್ಯದೇಶವು ಎನ್ನುವ ದಾಸರ ವಚನವನ್ನು ನೆನೆಪಿಸಿಕೊಂಡು ಕಾರ್ಯ ಪ್ರವೃತ್ತರಾಗಿ. ಒಳಿತಾಗುವುದು.

ಧನುಸ್ಸು:- ಎಲ್ಲ ವಿಚಾರಗಳಲ್ಲಿಯೂ ಯಶಸ್ಸು ಸಾಧ್ಯವಾಗಬೇಕಾದರೆ ಮಾತಿನಲ್ಲಿ ನಯ, ವಿನಯ ರೂಢಿಸಿಕೊಳ್ಳಿ. ಹಿರಿಯರ ಸಂಗಡ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಸದ್ಯಕ್ಕೆ ಸ್ಥಿರಾಸ್ತಿ ಖರೀದಿ ಬಗ್ಗೆ ಚಿಂತೆ ಬೇಡ.

RELATED ARTICLES  ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್.

ಮಕರ:- ಅಂದುಕೊಂಡ ಕಾರ್ಯದಲ್ಲಿ ಜಯಶೀಲರಾಗುವಿರಿ. ಮನೋನಿಯಾಮಕ ರುದ್ರದೇವರನ್ನು ಸ್ಮರಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತುಗಳನ್ನು ಆಲಿಸಿ.

ಕುಂಭ:- ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ದಯೆಯಿಂದ ಸುಲಲಿತವಾಗುತ್ತಿರುವವು. ಇದರಿಂದ ನಿಮ್ಮ ಸಹೋದ್ಯೋಗಿಗಳಿಗೆ ಹೇಳಿಕೊಳ್ಳಲಾಗದ ಸಂಕಟವನ್ನು ಉಂಟಾಗಿದೆ. ಅವರು ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಲು ಸಜ್ಜಾಗಿರುವರು.

ಮೀನ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ತರ್ಕಬದ್ಧವಾಗಿ ಆಲೋಚಿಸಿ. ಆದರೆ ನಿಜವಾದ ಹಾಲನ್ನು ನಿರ್ಲಕ್ಷಿಸದಿರಿ. ದೂರದ ಬಂಧುವಿನ ಆಗಮನದಿಂದ ಸಂತಸ ಹೊಂದುವಿರಿ. ವಿವಿಧ ಮೂಲಗಳಿಂದ ಹಣ ಹರಿದು ಬರುವುದು.