ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸುದೀರ್ಘ 23 ವರ್ಷಗಳಿಗಿಂತಲೂ ಅಧಿಕ ಅವಧಿ ಸೇವೆಸಲ್ಲಿಸಿ ಸೇವಾನಿವೃತ್ತರಾದ ಲಕ್ಷ್ಮಣ ನಾಗಪ್ಪ ಅಂಬಿಗ ಅವರ ಸೇವಾವಧಿಯ ಸಿಂಹಾವಲೋಕನ ಮಾಡಿ, ಕ್ರೀಡಾಕ್ಷೇತ್ರದಲ್ಲಿ ಅವರ ಅನುಪಮ ಸೇವೆಯ ಹೆಜ್ಜೆಗಳನ್ನು ಸ್ಮರಿಸಿ ಸನ್ಮಾನ ಗೈದು ಸತ್ಕರಿಸಿ ಬೀಳ್ಕೊಡಲಾಯಿತು.
ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾತನಾಡಿ ಷಟಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನೇ ಉಸಿರಾಗಿಸಿಕೊಂಡ ಅವರ ಸೇವೆ ಮುಂದೆಯೂ ಲಭಿಸುವಂತಾಗಲಿ ಎಂದು ಹಾರೈಸಿದರು. ಸಹಶಿಕ್ಷಕರಾದ ವಿಷ್ಣು ಎನ್. ಭಟ್ಟ, ಎಸ್.ಪಿ.ಪೈ, ಕಿರಣ ಪ್ರಭು, ಪ್ರದೀಪ ನಾಯಕ, ಕೆ.ಎಸ್.ಅನ್ನಪೂರ್ಣ, ಬಿ.ಪವಿತ್ರ, ಚಂದ್ರಕಲಾ ಭಂಡಾರಿ, ಪ್ರಶಾಂತ ಗಾವಡಿ ಎಲ್.ಎನ್.ಅಂಬಿಗ ಅವರೊಂದಿಗೆ ಕಳೆದ ಸವಿ ಸಮಯವನ್ನು ಮೆಲಕು ಹಾಕಿದರು. ಮುನ್ನೂರು ಮಕ್ಕಳು ಬೀಳ್ಕೊಡುಗೆಗೆ ಸಾಕ್ಷಿಯಾದರು.