ಕುಮಟಾ: ಮುದ್ದು ಕ್ರಿಯೇಶನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಪ್ರಕಾಶ ದಾರೇಶ್ವರ ಅವರ ನಿರ್ದೇಶನದ ಮೊದಲನೇಯ ಕಿರುಚಿತ್ರ “ನೀನಿರದೆ” ಬಿಡುಗಡೆ ಸಮಾರಂಭವು ಜೂ. 2 ರಂದು ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದರ ಜೊತೆ “ಡಾನ್ಸ್ ಕುಮಟಾ ಡಾನ್ಸ್” ಎಂಬ ಸೋಲೋ ಕಾಂಪಿಟೇಶನ್ ಕೂಡ ಆಯೋಜಿಸಲಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಿರುಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಸಂಚಾಲಕರು ವಿನಂತಿಸಿದ್ದಾರೆ.