ಕುಮಟಾ : ಶಾಸಕರಾದ ದಿನಕರ ಕೆ ಶೆಟ್ಟಿಯವರು
ಇಂದು ಕುಮಟಾ ತಾಲೂಕಿನ ಅಳಕೋಡ್ ಪಂಚಾಯತ್ ವ್ಯಾಪ್ತಿಯ ಯಾಣ,ಶೇಡಿಗದ್ದೆ ಗೆ ಪ್ರಧಾನಿ ನರೇಂದ್ರ ಮೋದಿ ಜಿ ಯವರ ಯೋಜನೆ ಯಾದ ಪಂಡಿತ್ ದೀನದಯಾಳ್ ಯೋಜನೆಯಡಿ ವಿದ್ಯುತ್ ಸಂಪರ್ಕ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನ್ಯ ಶಾಸಕರು ಮಾತನಾಡಿ ಪ್ರತಿಹಳ್ಳಿಗೂ ವಿದ್ಯುತ್: ಕತ್ತಲೆಯ ಕೂಪ ಮುಂದಿಟ್ಟುಕೊಂಡು ‘ನವ ಭಾರತ ನಿರ್ಮಾಣ’ದ ಕನಸು ಕಾಣುವುದರಲ್ಲಿ ಅರ್ಥವಿಲ್ಲ ಎನ್ನುವ ಚಿಂತನೆ ಮೋದಿಯವರದ್ದು. ಈ ದಿಸೆಯಲ್ಲಿ ಪ್ರತಿ ಹಳ್ಳಿಗೂ ಬೆಳಕಿನ ಭಾಗ್ಯ ಕಲ್ಪಿಸುವುದು ಅವರ ಕನಸು. 2019ರ ವೇಳೆಗೆ ದೇಶದ ಯಾವ ಹಳ್ಳಿಯೂ ವಿದ್ಯುತ್ ಸಂಪರ್ಕದಿಂದ ಹೊರಗುಳಿಯಬಾರದು ಎನ್ನುವ ಸಂಕಲ್ಪ ಅವರದ್ದು ಎಂದರು ನಮ್ಮ ಕ್ಷೇತ್ರಕ್ಕೆ 4 ಕೋಟಿ ಹಣ ಮಂಜೂರಾಗಿದೆ ಎಂದು ಈ ಕ್ಷಣ ದಲ್ಲಿ ಹೇಳಿದರು
ಈ ಸಂದರ್ಭ ದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಗಜಾನನ ಪೈ,ಶ್ರೀ ವಿಷ್ಣು ಗೌಡ, ಶ್ರೀ ಮಹೆಶ್ ಭಂಡಾರಿ, ಶ್ರೀ ಕಾರ್ತಿಕ್ ಭಟ್, ಶ್ರೀ ಸುಧೀರ್ ಗೌಡ, ಹೇಸ್ಕಾಂ ಮುಖ್ಯಾಧಿಕಾರಿ ಶ್ರೀ ಪಠಾಣ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.