ಕುಮಟಾ; ತಾಲೂಕಿನ ಹೆಗಡೆಯ ಎಸ್ ಇ ಕಮೀಟಿಯ ಶ್ರೀ ಶಾಂತಿಕಾಂಬಾ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಆಶಾಬೀ ಸೈಯದ್ ರವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು,
1981 ರಿಂದ 2019 ರ ತನಕ 38 ರ ವರ್ಷಗಳ ಸುಧೀರ್ಘ ಸೇವೆಯೊಂದಿಗೆ ಶುಕ್ರವಾರ ನಿವೃತ್ತಿ ಹೊಂದಿದ ಶಿಕ್ಷಕರಾಗಿ, ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ ಆಶಾಬೀ ಸೈಯದ್ ರವರನ್ನು ಶಾಲು ಹೊದೆಸಿ ಫಲ-ತಾಂಬೂಲ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಆಶಾಬೀಯವರು ಈ ಸನ್ಮಾನದಿಂದ ನನ್ನ ಹೃದಯ ತುಂಬಿ ಬಂದಿದೆ ಮಾತು ಮೌನವಾಗಿದೆ. ಈ ಶಾಲೆಯ ಆಡಳಿತ ಮಂಡಳಿಗೆ ನಾನು ಯಾವತ್ತೂ ಚಿರರುಣಿ. ನಾನು ಈ ಶಾಲೆಗೆ 1979-80 ರಲ್ಲಿ ಕಮಲಾ ಬಾಳಿಗಾ ಮಹಾವಿದ್ಯಾಲಯದಲ್ಲಿ ಬಿಎಡ್ ಮಾಡುವಾಗ ಶಾಲೆಗೆ ವಿದ್ಯಾರ್ಥಿಯಾಗಿ ಬಂದಿದ್ದೆ ಆಗ ತುಂಬಾ ನುರಿತ ಹಿರಿಯ ಶಿಕ್ಷಕರಿದ್ದರು ನಾವೆಲ್ಲ ತುಂಬಾ ಚಿಕ್ಕವರು ನಂತರ ಕಲಿಕಾ ಪಾಠ ಮುಗಿದು ಹೋಗುವಾಗ ನಾನು ಎಲ್ಲಾ ದೇವರನ್ನೂ ಬೇಡಿಕೊಂಡಿದ್ದೆ ನನಗೆ ಮುಂದೆ ಇದೇ ಶಾಲೆಯಲ್ಲಿ ವೃತ್ತಿ ಮಾಡುವ ಅವಕಾಸ ಸಿಗಲಿ ಅಂತ ಆ ದೇವರು ನನ್ನ ಪ್ರಾರ್ಥನೆ ಈಡೇರಿಸಿದರು ಪರಿಕ್ಷೆ ಮುಗಿದ ಫಲಿತಾಂಶ ಬಂದ ಕೂಡಲೇ ಈ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಆಹ್ವಾನಿಸಿದಾಗ ನಾನೂ ಅರ್ಜಿ ಹಾಕಿ ನಂತರ ಆಯ್ಕೆ ಕೂಡ ಆದಾಗ ಅಂದಿನ ಮುಖ್ಯಾಧ್ಯಾಪಕ ವಿ ಆರ್ ಹೆಗಡೆ ಮಾಸ್ತರು ನನ್ನನ್ನು ಬಹಳ ಸಂತೋಷದಿಂದ ಸ್ವಾಗತಿಸಿದ್ದು ಇನ್ನೂ ಕಣ್ಣು ಮುಂದಿದೆ ನಂತರ 38 ವರ್ಷದ ಹಾದಿಯ ದಿನಗಳಲ್ಲಿ ಎಲ್ಲಾ ಶಿಕ್ಷಕರೂ , ಆಡಳಿತ ಮಂಡಳಿಯವರೂ ನನ್ನ ಬಹಳ ಗೌರವ ಪ್ರೀತಿಯಿಂದ ಸೇವೆ ಸಲ್ಲಿಸಲು ಹಾಗೂ ಮುಖ್ಯಾಧ್ಯಾಪಕಿಯ ಗುರುತರ ಜವಾಬ್ದಾರಿ ನಿರ್ವಹಿಸಲು ಅವಕಾಶ ನೀಡಿದ್ದಾರೆ . ನನ್ನ ಕುಟುಂಬ ವರ್ಗದ ಸಹಕಾರವೂ ಅಗತ್ಯ ಇತ್ತು ಅವರೂ ಕೂಡ ನನ್ನನ್ನು ಹುರಿದುಂಬಿಸಿದ್ದಾರೆ.. ಹಿಂದ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಿ ಎಂ ಕಾಮತ್ ಸರ್ ರವರು ಹಾಗೂ ಶಾಲಾ ಕಛೇರಿ ಸಿಬ್ಬಂದಿ ಗಣಪತಿ ಹೆಗಡೆ ನನ್ನ ಎಲ್ಲಾ ಕಛೇರಿ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ನೆರವಾಗಿದ್ದಾರ ಅವರಿಗೂ ಅಭಿನಂದನೆಗಳು.ನಮ್ಮ ಶಾಲೆ ಶಿಕ್ಷಣದಲ್ಲಿ ಸ್ವಲ್ಪ ಕುಂಠಿತವಾಗಿದೆ ನಮ್ಮ ಶಿಕ್ಷಕರು ಅದನ್ನು ಸವಾಲಾಗಿ ಸ್ವೀಕರಿಸಿ ಈ ಬಾರಿಯ ಫಲಿತಾಂಶ ಮರುಕಳಿಸದೇ ನೂರಕ್ಕೆ ನೂರು ಫಲಿತಾಂಶ ಬರುವಂತೆ ಶ್ರಮ ವಹಿಸಿ ಶಿಕ್ಷಣ ನೀಡಿ ಏಂದು ಸಲಹೆ ನೀಡಿದರು.
ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳ ಪ್ರೋತ್ಸಾಹಿಸಲು ಶಾಲೆಗೆ ಒಂದು ಲಕ್ಷ ದೇಣಿಗೆ ನೀಡಿದರು ಮತ್ತು ವಿದ್ಯಾಥಿಗಳಿಗೆ ನೋಟ್ ಬುಕ್ ವಿತರಿಸಿದರು.
ಶಾಲೆಯ ಆಡಳಿತ ಮಂಡಳಿ ಚೇರಮನ್ ಗಜಾನನ ಗುನಗ ಮಾತನಾಡಿ ಒಂದು ಮದುವೆ ಮಂಟಪದಲ್ಲ್ಲಿ ಒಂದು ಹೆಣ್ಣನ್ನು ಧಾರೆ ಎರೆದು ಕೊಡುವಾಗ ಎಷ್ಟು ನೋವಾಗುತ್ತದೋ ಅದೇ ನೋವು ಇಂದು ನಾವು ಇವರನ್ನು ಬೀಳ್ಕೊಟ್ಟು ಕಳುಹಿಸುವಾಗ ನಮಗೆ ಆಗುತ್ತಿದೆ ಎಂದು ಅರ್ಥಪೂರ್ಣವಾಗಿ ನುಡಿದರು. ಆಶಾಬೀಯವರು ಒಬ್ಬ ಸಹೃದಯೀ ಉತ್ತಮ ಶಿಕ್ಷಕರು ..ಕನ್ನಡವನ್ನು ಉತ್ತಮವಾಗಿ ಉಚ್ಛಾರ ಹಾಗೂ ಮಾತನಾಡುವಂಥವರು. ಮಕ್ಕಳಿಗೆ ಮನಮುಟ್ಟುವಂತೆ ಪಾಠ ಮಾಡುವವರಾಗಿದ್ದರು. ಒಬ್ಬ ವಿದ್ತಾರ್ಥಿ ಉತ್ತಮ ಸಾಧನೆ ಮಾಡಬೇಕಾದರೆ 3 ಜನರ ಪಾತ್ರ ಅತೀ ಮುಖ್ಯ .ಅವುಗಳೆಂದರೆ ವಿದ್ಯಾರ್ಥಿ, ಶಿಕ್ಷಕ, ಪಾಲಕ ..ವಿದ್ಯಾರ್ಥೀ ಶಾಲೆಯಲ್ಲಿ ಕಲಿಸುವಾಗ ಗಮನವಿಟ್ಟು ಕೇಳಿ ಅದನ್ನು ಮನೆಯಲ್ಲಿ ಮತ್ತೆ ಪಠಣ ಮಾಡಬೇಕು, ಶಿಕ್ಷಕರು ಕಲಿಸುವಾಗ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠಮಾಡಿ ನಂತರ ಪ್ರತಿದಿನ ಅವರ ವಿದ್ಯಾಭ್ಯಾಸದ ಕಡೆಗೆ ಗಮನ ಇಡಬೇಕು. ಪಾಲಕರು ವಿದ್ಯಾರ್ಥೀ ಮನೆಗೆ ತೆರಳಿದ ನಂತ ಅವನು ಅಭ್ಯಾಸ ಮಾಡುವ ಬಗ್ಗೆ ಗಮನ ಹರಿಸಬೇಕು ಆಗಾಗ ಶಿಕ್ಷಕರನ್ನು ಭೇಟಿಮಾಡಿ ಮಕ್ಕಳ ಬಗ್ಗೆ ವಿಚಾರಿಸಬೇಕು ಅಂತ ತಿಳಿಸಿದರು. ಕೊನೆಯದಾಗಿ ಆಶಾಬೀಯವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಆಡಳಿತ ಮಂಡಳಿ ಆಧ್ಯಕ್ಷ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಪುರುಷೋತ್ತಮ ಶಾನಭಾಗ ಹೆಗಡೆಕರ್, ಕಾರ್ಯದರ್ಶಿ ಗಣೇಶ ಶಿಂಗನಕುಳಿ, ನಿವೃತ್ತ ಮುಖ್ಯಾಧ್ಯಾಪಕ ಡಿ ಎಮ್ ಕಾಮತ, ಸದಸ್ಯೆ ನಾಗವೇಣಿ ಹೆಗಡೆ, ಶಾಲಾ ಸದಸ್ಯ ಡಾ ಗೋಪಾಲಕೃಷ್ಣ ಹೆಗಡೆ ಆಶಾಬೀ ಯವರ ಸೇವೆಯನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ ಮುಂದೆಯೂ ಕೂಡ ಅವರ ಸಾಮಾಜಿಕ ಸೇವೆ, ವಿದ್ಯಾದಾನ ಹೀಗೇ ಮುಂದುವರೆಯಲಿ ಅವರಿಗೆ ಅವರ ಕುಟುಂಬಕ್ಕೆ ಭಗವಂತ ಉತ್ತಮ ಆರೋಗ್ಯ ಸುಖ ಸಂತೋಷ ಕರುಣಿಸಲಿ ಎಂದು ಶುಭ ಹಾರೈಸಿದರು.
ಮುಂದಿನ ಶಾಲಾ ಮುಖ್ಯಾಧ್ಯಾಪಕ ರಾಗಲಿರುವ ಶ್ರೀಪ್ರಕಾಶ ಬಿ ನಾಯ್ಕ ರವರಿಗೆ ಆಶಾಬೀಯವರು ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸೀಕರಿಸಿದ ಶ್ರೀಪ್ರಕಾಶ ನಮ್ಮ ಶಾಲೆಯ ಫಲಿತಾಂಶ ಈ ಬಾಡಿ ಸ್ವಲ್ಪ ಹಿನ್ನೆಡೆ ಕಂಡಿರುವುದು ಬಹಳ ನೋವು ತಂದಿದೆ ಆದ್ದರಿಂದ ಈ ಅಧಿಕಾರ ಸೀಕರಿಸುವ ಸಂದರ್ಭ ಸಂತಸ ತರುತ್ತಿಲ್ಲ ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ಮಕ್ಕಳಿಗೆ ನಾವು ಎಲ್ಲಾ ಶಿಕ್ಷಕರೂ ಸೇರಿ ನೀಡುತ್ತೇವೆ ಶಾಲಯ ಫಲಿತಾಂಶ ಮೊದಲಿನಂತೆಯೇ ಮೊದಲ ಪಂಕ್ತಿಗೆ ಬಂದಾಗಲೇ ನಮಗೆಲ್ಲ ಸಂತಸ ಎಂದರು.
ಹಳೆಯ ವಿದ್ಯಾರ್ಥಿಗಳ ಪರವಾಗಿ ಶಾಲಾ ಸದಸ್ಯರಾದ ಅಮರನಾಥ ಭಟ್ಟ, ನಾಗರಾಜ ಪೈ ಆಶಾಬೀ ಮೇಡಂ ಮುಂದಿನ ಜೀವನ ಸುಖಮಯವಾಗಿರಲಿ ನಿಮ್ಮ ಆಶಿರ್ವಾದ ನಮ್ಮೆಲ್ಲಾ ವಿದ್ಯಾರ್ಥಿಗಳ ಮೇಲೆ ಸದಾ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರಾದ ಜಿ ಪಿ ನಾಯ್ಕ, ಎನ್ ವಿ ನಾಯ್ಕ, ಎಸ್ ಜಿ ದಿವಾಕರ್ , ಸದಸ್ಯ ಬೆಳಿಯಪ್ಪ ನಾಯ,್ಕ ಆಶಾಬೀ ಯವರ ಕುಟುಂಬಸ್ತರು, ಹೆಗಡೆ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ, ನಾಗರಿಕರು ಉಪಸ್ಥಿತರಿದ್ದರು.
ಗಣಪತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು, ಈಗಿನ ಮುಖ್ಯಾಧ್ಯಾಪಕ ಶ್ರೀಪ್ರಕಾಶ ನಾಯ್ಕ ಸ್ವಾಗತಿಸಿದರು.