ಕುಮಟಾ: ಕಡು ಬೇಸಿಗೆಯಿಂದಾಗಿ ಎಲ್ಲೆಡೆಯಲ್ಲಿಯೂ ನೀರಿಗೆ ಬರ. ಕುಮಟಾ ಪಟ್ಟಣದಲ್ಲಿಯೂ ನೀರಿನ ಹಾಹಾಕಾರ ತಪ್ಪಿದ್ದಲ್ಲ. ಇಂತಹ ಜೀವ ಜಲದ ಸಮಸ್ಯೆ ನಿವಾರಿಸಲು ಶಾಸಕರಾದ ದಿನಕರ ಶೆಟ್ಟಿ ಹೊಸ ಚಿಂತನೆ ನಡೆಸಿದ್ದಾರೆ.ಅದುವೇ ಹಳೆ ಬಾವಿ, ಬೋರ್ ವೆಲ್ ಗಳ ಹಾಗೂ ಕೆರೆಯ ಪುನರುಜ್ಜೀವನ.
ಈ ಹಿನ್ನಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿನ ಹಳೆಯ ಬೋರ್‌ವೆಲ್‌ಗಳು, ಕೆರೆ, ಬಾವಿಗಳನ್ನು ಗುರುತಿಸಿ ಉತ್ತಮ ನೀರು ಪಡೆಯುವ ಶಾಸಕ ದಿನಕರ ಶೆಟ್ಟಿಯವರ ಪ್ರಾಮಾಣಿಕ ಪ್ರಯತ್ನಕ್ಕೆ ನೆಲ್ಲಿಕೇರಿ ಕೃಷಿ ಸಂಶೋಧನಾ ಕೇಂದ್ರದ ಬೋರ್‌ವೆಲ್‌ನಲ್ಲಿ ಉತ್ತಮವಾದ, ಹೇರಳ ನೀರು ಲಭಿಸಿದೆ.
ಶಾಸಕ ದಿನಕರ ಶೆಟ್ಟಿ, ಅಘನಾಶಿನಿ ನೀರು ಸಂಪೂರ್ಣ ಬತ್ತಿರುವುದರಿಂದ ಪಟ್ಟಣದಲ್ಲಿನ ಖಾಸಗಿ ಹಾಗೂ ಸರ್ಕಾರಿ ಬೋರ್‌ವೆಲ್‌ಗಳನ್ನು ಶೋಧಿಸುತ್ತಿದ್ದೇವೆ ಅವುಗಳನ್ನು ಸ್ವಚ್ಛ ಗೊಳಿಸಿಸುವ ಹಾಗೂ ಪುನರುಜ್ಜೀವನ ಗೊಳಿಸುವ ಪ್ರಯತ್ನ ನಡೆಸಿದ್ದೇವೆ ಎಂದರು.
ಈಗಾಗಲೇ ಯಾತ್ರಿ ನಿವಾಸದ ಬೋರವೆಲ್ ನೀರನ್ನು ಪಟ್ಟಣಕ್ಕೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಬಳಸಲಾಗುತ್ತಿದೆ. ಈಗ ನೆಲ್ಲಿಕೇರಿಯ ಬೋರವೆಲ್‌ನಲ್ಲಿಯೂ ಉತ್ತಮವಾದ ನೀರು ಲಭಿಸಿದೆ. ಇದನ್ನು ಹೊರತು ಪಡಿಸಿ ಬೇರೆ ಬೇರೆ ಕಡೆಗಳಲ್ಲಿಯೂ ನೀರಿನ ಮೂಲಗಳನ್ನು ಹುಡುಕಿದ್ದೇವೆ. ಪಟ್ಟಣಕ್ಕೆ ಸಾಕಾಗುವಷ್ಟು ನೀರು ಪಟ್ಟಣದಲ್ಲಿಯೇ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನಮಾಡುವುದಾಗಿ ತಿಳಿಸಿದರು.