ದೆಹಲಿ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಚಾಣಾಕ್ಷ ನಡೆಯಿಂದ ಪ್ರತಿಪಕ್ಷಗಳ ಸದ್ದು ಅಡಗಿಸಿದ್ದ ಅಮಿತ್‌ ಶಾ ಈಗ ಗ್ರಹ ಸಚಿವರಾಗಿ ಮೋದಿ ಸಂಪುಟದ ಪ್ರಭಲ ನಾಯಕ ಎಂಬಂತೆ ಆಗಿದ್ದಾರೆ.

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಮಿತ್‌ ಶಾ ಉಗ್ರರ ಹಿಟ್‌ ಲಿಸ್ಟ್‌ ರೆಡಿ ಮಾಡಿದ್ದಾರೆ. ಕಾಶ್ಮೀರ ಕಣಿವೆಯ ಟಾಪ್‌ 10 ಉಗ್ರರ ಲಿಸ್ಟ್‌ ರೆಡಿ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

RELATED ARTICLES  ಮಾತೃತ್ವಮ್‍ನಿಂದ ಗೋಸಂರಕ್ಷಣೆಯ ಮೌನ ಚಳವಳಿ 10 ಲಕ್ಷ ರೂಪಾಯಿ ಮೌಲ್ಯದ ಮೇವು ವಿತರಣೆ

ಸೇನಾಪಡೆಗಳು ಹಾಗೂ ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದು ಅಮಿತ್‌ ಶಾ ಈ ಹಿಟ್‌ ಲಿಸ್ಟ್‌ ರೆಡಿ ಮಾಡಿದ್ದಾರೆ.

ದೇಶದ ಆಂತರಿಕ ಭದ್ರತೆಯ ಕುರಿತು ಉನ್ನತ ಮಟ್ಟದ ಸಭೆಯನ್ನು ಅಮಿತ್‌ ಶಾ ಮಂಗಳವಾರ ನಡೆಸಿದರು.ಈ ಸಭೆಯಲ್ಲಿ ಉಗ್ರರ ಹಿಟ್‌ ಲಿಸ್ಟ್ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಉಗ್ರರನ್ನು ಕೂಡಲೇ ಮಟ್ಟ ಹಾಕಬೇಕು ಎಂದು ಅಮಿತ್‌ ಶಾ ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  " ಗೌರಿ ಲಂಕೇಶ್ ಹೇಡಿಯಾಗಿರಲಿಲ್ಲ. ಆಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿತ್ತು"

ಈ ಹಿಟ್‌ಲಿಸ್ಟ್‌ನಲ್ಲಿ ಲಷ್ಕರೆ ತಯ್ಬಾ, ಹಿಜ್ಬುಲ್‌ ಮುಜಾಹಿದ್ದೀನ್‌ ಸೇರಿದಂತೆ ಕೆಲವು ಉಗ್ರ ಸಂಘಟನೆಗಳ ಮುಖಂಡರು ಇದ್ದಾರೆ.ಈ ಪೈಕಿ ರಿಯಾಜ್‌ ನಾಯ್ಕು, ಒಸಾಮಾ, ಅಶ್ರಫ್‌ ಮೌಲ್ವಿ ಸೇರಿದಂತೆ ಪ್ರಮುಖ ಉಗ್ರರ ಹೆಸರುಗಳೇ ಇದೆ ಎನ್ನಲಾಗಿದೆ.