ಗೋಕರ್ಣ: ಮೊಡರ್ನ ಎಜ್ಯುಕೇಶನ ಟ್ರಸ್ಟನ ವಿದ್ಯಾ ಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ಮಂಗಳವಾರದಂದು ಗೋಕರ್ಣ ಪೊಲೀಸ್ ಇಲಾಖೆಯವರು ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಸುಪ್ರಿಂ ಕೋರ್ಟ ಮಾರ್ಗ ಸೂಚಿ ಪಾಲಿಸಲು ಗೋಕರ್ಣ ಪಿ.ಎಸ್.ಐ ಸಂತೋಷಕುಮಾರ ಎಮ್ ಇವರು ವಿಶೇಷ ಕಾರ್ಯಕ್ರಮ ನೀಡಿದರು.
ಶಾಲಾ ಆವರಣದಲ್ಲಿ ಮಕ್ಕಳ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಮಕ್ಕಳನ್ನು ಕರೆತರುವ ವಾಹನಗಳಲ್ಲಿ ಪಾಲಿಸಬೇಕಾದ ನಿಯಮಗಳು, ಖಾಸಗಿ ವಾಹನಗಳು ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಮಂಡಿಸಿದ ಮಾಹಿತಿಯನ್ನು ಆಟೋ ರಿಕ್ಷಾ ಚಾಲಕರು, ಶಾಲಾವಾಹನ ಚಾಲಕರು ಹಾಗೂ ಮಕ್ಕಳು ಕೂತುಹಲದಿಂದ ವಿಕ್ಷಿಸಿದರು.
ಈ ಸಂದರ್ಭದಲ್ಲಿ ಪೊಲೀಸ ಸಿಬ್ಬಂದಿಗಳಾದ ಎ.ಎಸ್.ಐ ವೆಂಕಟ್ರಮಣ ಹರಿಕಾಂತ, ರಾಜು ಆಗೇರ, ಶಿವಾನಂದ ಗೌಡ, ನಾಗರಾಜ ಪಟಗಾರ,ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕ ಸಿಬ್ಬಂದಿವರ್ಗದವರು ಪಾಲಕರು ಹಾಗೂ ಊರ ಸುತ್ತಮುತ್ತಲಿನ ನಾಗರೀಕರು ಉಪಸ್ಥಿತರಿದ್ದರು.