ಶಿರಸಿ: ತಾಲೂಕಿನ ಅಗಸಾಲ ಕಿಬ್ಬಳ್ಳಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅರ್ಧ ಏಕರೆಗೂ ಅಧಿಕ ಅಡಿಕೆ ತೋಟ ಸುಟ್ಟು ಕರಕಲಾದ ಘಟನೆ ನಡೆದಿದೆ.

ಬಿಸಿಲಿನಿಂದ ಬಸವಳಿಯುತ್ತಿದ್ದ ತೋಟಕ್ಕೆ ಬೆಂಕಿ ಹೊತ್ತುಕೊಂಡು ಸುಟ್ಟು ಕರಕಲಾದ ಘಟನೆ ಎಂತಹವರನ್ನೂ ಮೂಕ ವಿಸ್ಮಿತರಾಗಿಸುವಂತೆ ಇತ್ತೆಂದು ಸ್ಥಳೀಯರು ಹೇಳಿದ್ದಾರೆ.

RELATED ARTICLES  ಜನಶಿಕ್ಷಣ ಸಂಸ್ಥಾನದಿಂದ ಅಂಕೋಲಾದಲ್ಲಿ ‘ಸ್ವಚ್ಚತಾ ಪಕ್ವಾಡಾ’ ಕಾರ್ಯಕ್ರಮ

ಭೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗಸಾಲ ಕಿಬ್ಬಳ್ಳಿಯ ಸುಬ್ರಾಯ ರಾಮಚಂದ್ರ ಹೆಗಡೆ ಇವರಿಗೆ ಸೇರಿದ ತೋಟ ಬೆಂಕಿಗೆ ಆಹುತಿಯಾಗಿದೆ.

ಘಟನೆಯಲ್ಲಿ 300 ಕ್ಕೂ ಅಧಿಕ ಅಡಿಕೆ ಮರ, ಕಾಳು ಮೆಣಸು, ಬಾಳೆ ಗಿಡಗಳು ಭಸ್ಮವಾಗಿದೆ. ಅಂದಾಜು 5 ಲಕ್ಷ ರೂಪಾಯಿ ನಷ್ಟವಾಗಿದೆ.

RELATED ARTICLES  ಪುಟಾಣಿ ತ್ರಿಶಿಕಾಳ ಅಮೋಘ ಸಾಧನೆ : ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿತು ಹೆಸರು.