ಕುಮಟಾ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸಿತಾಣಗಳಿಂದ ಹಿಡಿದು ಸಾವಿನ ಮನೆಗೆ ಹೋಗುವ ದಾರಿಯವರೆಗೆ ಎಲ್ಲಾ ಸವಲತ್ತುಗಳಿವೆ.ನಮ್ಮಲ್ಲಿ ಪ್ರವಾಸಿ ತಾಣಗಳು ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೋ!! ಅಷ್ಟೇ ಪ್ರಸಿದ್ಧಿಯನ್ನು  ಅಪಘಾತದ ಘಟನೆಗಳು ಪಡೆದುಕೊಂಡಿದೆ ಇದು ನಮ್ಮ ದುರ್ದೈವ.

         ನಮ್ಮಲ್ಲೆರಿಗೂ ತಿಳಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲ ಪ್ರಾವಾಸಿ ತಾಣಗಳಿವೆ ಆದರೇ ಗುಣಮಟ್ಟದ ಚಿಕಿತ್ಸೆ ಪಡೆಯಲು ಆಸ್ಪತ್ರೆ ಇಲ್ಲ.ಅಪಘಾತ ಆದಾಗ ನಮ್ಮ ಜಿಲ್ಲೆಯಲ್ಲಿ ಚಿಕಿತ್ಸೆ ಕೊಡಿಸಲು   ಸಾಧ್ಯವಿಲ್ಲದೇ!! ಮಣಿಪಾಲ್ಗೇ ಚಿಕಿತ್ಸೆ ಪಡೆಯಲು ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಅಮೂಲ್ಯ ಜೀವ ದೇಹವನ್ನು ಬಿಟ್ಟು ಹೋಗುತ್ತಿದೆ.

         ಇಂದು ನಮ್ಮ ಜಿಲ್ಲೆಯಲ್ಲಿ ಒಳ್ಳೆ ಗುಣಮಟ್ಟದ,ಎಲ್ಲ ತಂತ್ರಜ್ಞಾನ ಹೊಂದಿರುವ ಆಸ್ಪತ್ರೆಯ ಅವಶ್ಯಕತೆ ಇದೆ. ಆದರೇ ನಮ್ಮ ಜಿಲ್ಲೆಯ ಹಲವು ವರ್ಷಗಳಿಂದ ನಮ್ಮ ರಾಜಕೀಯ ನಾಯಕರುಗಳಾದ ಅನಂತ ಕುಮಾರ್ ಹೆಗ್ಡೆ ಮತ್ತು R.V ದೇಶಪಾಂಡೆಯವರು ಆಸ್ಪತ್ರೆಯ ನಿರ್ಮಾಣದ  ಅಭಿವೃದ್ಧಿಯ ಪರವಾಗಿ ಯಾವುದೇ ಕ್ರಮ,ಯೋಜನೆ ಜಾರಿಗೆ ತಂದಿಲ್ಲ ಪಕ್ಷದ ಪರವಾಗಿ ಚಿಂತನೆ ಮಾಡುವುದನ್ನು ಮರೆತು ವಾಸ್ತವ ವಿಷಯ ಇರುವುದು ಏನೆಂದರೆ ನಾವು ಅರಿತುಕೊಳ್ಳಬೇಕಿದೆ.

RELATED ARTICLES  ಶ್ರೀ ಶ್ರೀನಾಗಾನಂದ ಸ್ವಾಮೀಜಿಯವರಿಗೆ 'ಗೋಕರ್ಣ ಗೌರವ'

   ಅಪಘಾತದಲ್ಲಿ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿರುವುದು ಮುಖ್ಯವಾಗಿ ”ಪಕ್ಷದ ಕಾರ್ಯಕರ್ತರು”(ಕಾಂಗ್ರೇಸ್, ಬಿ.ಜೆ.ಪಿ,ಜೆಡಿಎಸ್) “ವಿದ್ಯಾರ್ಥಿಗಳು”,” ಉದ್ಯೋಗಿಗಳು” “ವಾಹನ ಚಾಲಕರು”.ಪಕ್ಷದ ಅಭ್ಯರ್ಥಿಗಳ ಅಭಿವೃದ್ಧಿಗಾಗಿ,ಗೆಲುವಿಗಾಗಿ ಪ್ರತಿಯೊಬ್ಬ ಕಾರ್ಯಕರ್ತರು  ನಿಸ್ವಾರ್ಥ ದಿಂದ ಸೇವೆ ಸಲ್ಲಿಸುತ್ತಾನೆ. ಆದರೇ ಅದೇ ಕಾರ್ಯಕರ್ತರು ಅಪಘಾತದಲ್ಲಿ ತಮ್ಮ ಅಮೂಲ್ಯ ಜೀವವನ್ನು ಚಿಕಿತ್ಸೆ ಪಡೆದು, ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದೇ ಮಾರ್ಗಮದ್ಯದಲ್ಲಿಯೇ ಅಮೂಲ್ಯ ಪ್ರಾಣ ಪಕ್ಷಿ ಹಾರಿ ಹೋಗುವಂತಾಗಿದೆ.

    ಇಂದು ನಮ್ಮ ಜಿಲ್ಲೆಯಲ್ಲಿ ಎಲ್ಲ ಸವಲತ್ತುಗಳನ್ನು ಹೊಂದಿರುವ ಆಸ್ಪತ್ರೆಯನ್ನು ತೆರೆಯಲು ನಮ್ಮೆಲ್ಲರಿಗೂ ಇರುವ ಒಂದೇ ಒಂದು ಅವಕಾಶ ಯೆಂದರೆ ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ವಿದ್ಯಾರ್ಥಿಗಳಿಂದ ಹಿಡಿದು,ಉದ್ಯೋಗಿಗಳ ತನಕ ಪ್ರತಿಯೊಬ್ಬರು ಹೋರಾಟದಲ್ಲಿ ನಿಷ್ಪಕ್ಷಪಾತವಾಗಿ ಒಗ್ಗೂಡಬೇಕು. ಹಾಗೆಯೇ ಅನಂತಕುಮಾರ್ ಹೆಗ್ಡೆ ಮತ್ತು R. V ದೇಶಪಾಂಡೆ ಯವರಿಗೆ ಆಹ್ವಾವನ ನೀಡಬೇಕು.ಅನಂತಕುಮಾರ್ ಹೆಗ್ಡೆಯವರು ಕೇಂದ್ರ ಸರ್ಕಾರದಿಂದ ಮತ್ತು ದೇಶಪಾಂಡೆ ಯವರಿಂದ ರಾಜ್ಯ ಸರ್ಕಾರದಿಂದ ತಲಾ 50% ಆಸ್ಪತ್ರೆಯ ವೇಚ್ಚವನ್ನು ನೀಲಿ ನಕ್ಷೆಯನ್ನು ತಯಾರಿಸಿ ಅಭಿವೃದ್ಧಿ ನಿಧಿಯಿಂದ ಲಭಿಸುವಂತೆ ಮಾಡಬೇಕು. ಯಾವ ವೇಕ್ತಿಯಿಂದ ಇದು ಸಾಧ್ಯವಿಲ್ಲವೋ ಆ ವೇಕ್ತಿಗಳು ರಾಜಕೀಯ ದಿಂದ ಪೂರ್ಣ ನಿವೃತ್ತಿಯನ್ನು ಪಡೆದುಕೊಳ್ಳುವಂತೆ ಮಾಡಬೇಕು. ನಮ್ಮ ಕರಾವಳಿ ಜನತೆ ತುಂಬಾ ಬುದ್ಧಿವಂತರು ನಮ್ಮಲ್ಲಿ ಅಭಿವೃದ್ಧಿ ಮಾಡುವಂತಹ ನಾಯಕರು ಇದ್ದಾರೆ.

RELATED ARTICLES  ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ವಿತರಣೆ ನಾಳೆ : ಮಾಹಿತಿ ನೀಡಿದ ನ್ಯಾಯವಾದಿ ನಾಗರಾಜ ನಾಯಕ

ಅಂತವರು ರಾಜಕೀಯಯಕ್ಕೆ ಪ್ರವೇಶಪಡೆದು ಅಭಿವೃದ್ಧಿ ಮಾಡುತ್ತಾರೆ ಹಾಗೆಯೇ ಆಸ್ಪತ್ರೆಯ ನಿರ್ಮಾಣ ಮಾಡುವಂತಹ ಜವಾಬ್ದಾರಿಯನ್ನು ಹೊರುತ್ತಾರೆ.ಇಂದು ನಮಗೆ ಶೀಘ್ರವಾಗಿ ಬೇಕಿರೋದು ಆಸ್ಪತ್ರೆ.ಇದನ್ನು ಆದಷ್ಟು ಬೇಗ ನಾವು ಪಡೆದುಕೊಳ್ಲಲು ಬೇಕಾಗುವಂತಹ ಯೋಜಗಳನ್ನು ಹಾಕಿಕೊಳ್ಳಬೇಕು.ಇಲ್ಲವಾದಲ್ಲಿ ರಾಜಕೀಯಕ್ಕಾಗಿ ನಾಯಕರು,ಸಾವಿಗೆ ಕಾರ್ಯಕರ್ತರು ಎಂಬ ಮುನ್ನಡಿ ಜೀವಂತವಾಗಿರಬೇಕಾಗುತ್ತದೆ.

         ಇಂತಹ ಹೋರಾಟದ ಮುಂದಾಳತ್ವವನ್ನು ತೆಗದಿಕೊಳ್ಳಲು ಒಬ್ಬ ನಾಯಕನ ಅವಶ್ಯಕತೆ ಇದೆ ಎಂಬ ನಿಟ್ಟಿನಲ್ಲಿ UK EXPRESS ತನ್ನ ಅಭಿಯಾನ ಪ್ರಾರಂಭಿಸಿ. ವಾಟ್ಸಪ್ ಹಾಗೂ ಫೇಸ್ ಬುಕ್‌ ಫ್ರೇಮ್ ಗಳನ್ನು ತಯಾರಿಸಿ ಜನತೆಯ ಗಮನ ಸೆಳೆಯುತ್ತಿದೆ.