ಕುಮಟಾ : ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ‘ಎಡ್ಮಿನಿಸ್ಟ್ರೇಟರ್’ (ಆಡಳಿತಾಧಿಕಾರಿ) ಆಗಿ ನೇಮಕಗೊಂಡಿರುವ ಶ್ರೀ ಜಯದೇವ ಬಳಗಂಡಿಯವರಿಗೆ ಸತ್ವಾಧಾರ ಬಳಗದ ಪರವಾಗಿ ಹಾರ್ದಿಕ ಅಭಿನಂದನೆಗಳು.
ಸಾಮಾಜಿಕ ಕಾರ್ಯ, ನಿರೂಪಣೆ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಗುರುತಿಸಿಕೊಂಡಿರುವ ಇವರು ಹಲವು ವರ್ಷಗಳ ಕಾಲ ಕೋ ಓಪರೇಟಿವ್ ಬ್ಯಾಂಕ್ ಮ್ಯಾನೇಜರ್ ಆಗಿಯೂ ಸೇವೆ ಸಲ್ಲಿಸಿದ್ದರು.ಅನುಭವೀ ಸಮರ್ಥ ಆಡಳಿತ ಮಂಡಳಿಯ ಸರ್ವ ಸದಸ್ಯರ ಮಾರ್ಗದರ್ಶನದ ಮೇರೆಗೆ ಅವರು ಈ ಸ್ಥಾನವನ್ನು ಅಲಂಕರಿಸಿರುತ್ತಾರೆ.
ಹಾಡುಗಾರರು, ನಿರೂಪಕರು, ಶಿಕ್ಷಣ ಪ್ರೇಮಿಗಳು, ಚಿಂತಕರು ಆಗಿರುವ ಇವರು ಬಹುಮುಖ ಪ್ರತಿಭೆ.ಇವರ ಪ್ರತಿಭಾನ್ವಿತ ವ್ಯಕ್ತಿತ್ವ ಹಾಗೂ ಪ್ರತಿಭೆಗೆ ಈ ಸ್ಥಾನ ಒಲಿದುಬಂದಿದ್ದು ಈಗಾಗಲೇ ಜನ ಮೆಚ್ಚುಗೆ ಪಡೆದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ಪ್ರಮುಖ ಹುದ್ದೆ ಅಲಂಕರಿಸಿ ಸಂಸ್ಥೆಗಾಗಿ ಪ್ರಾಮಾಣಿಕವಾಗಿ ದುಡಿಯುವ ಆಶಯ ವ್ಯಕ್ತಪಡಿಸಿದ್ದಾರೆ.