ಶಿರಸಿ :ತಾಲ್ಲೂಕಿನ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ,ಜಾನ್ಮನೆ ವಲಯ ಅರಣ್ಯ ಇಲಾಖೆ ಕಾರ್ಯಾಲಯ ಹಾಗೂ ಪ್ರೌಢಶಾಲೆಯ ಶ್ರೀ ಜಗದೀಶ ಚಂದ್ರ ಬೋಸ್ ಇಕೋ ಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಬೀಜದುಂಡೆ ಬಿತ್ತನೆ ಆಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಪರಿಸರದಲ್ಲಿ ಸಸಿಯನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಪವಿತ್ರಾ.ಯು.ಜೆ, ವಲಯ ಅರಣ್ಯಾಧಿಕಾರಿಗಳು ಜಾನ್ಮನೆ ಮಾತನಾಡಿ ಭಾರತದಲ್ಲಿ 33% ಅರಣ್ಯ ಸಂಪತ್ತು ಇರಬೇಕಿತ್ತು ಆದರೆ ಅಷ್ಟೊಂದು ಪ್ರಮಾಣದಲ್ಲಿ ಅರಣ್ಯವಿಲ್ಲ ಅದನ್ನ ಅಭಿವೃದ್ಧಿಪಡಿಸಲು ಬೀಜದುಂಡೆ ಬಿತ್ತನೆ ಕಾರ್ಯಕ್ರಮ ಸಹಾಯಕ. ಮನುಷ್ಯ ಉತ್ತಮ ಪರಿಸರದಲ್ಲಿ ಬದುಕುವ ಅವಶ್ಯಕತೆ ಇರುವುದರಿಂದ ಪರಿಸರದ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಜಾನ್ಮನೆ ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀ ನೂರ್ ಅಹಮದ್,ಶ್ರೀ ಸುರೇಶ ಗಾಂವ್ಕರ್ ಹಾಗೂ ಅವರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕುಮಾರಿ ಮಹಾಲಕ್ಷ್ಮೀ ನಾಯಕ ಪ್ರಾರ್ಥಿಸಿದಳು. ಮುಖ್ಯಾಧ್ಯಾಪಕರಾದ ಶ್ರೀ ಎಮ್ ಜಿ ಹೆಗಡೆ ಸ್ವಾಗತಿಸಿದರು. ಶ್ರೀ ಗಣೇಶ ಜಿ ಹೆಗಡೆ ವಂದಿಸಿದರು.ವಿಜ್ಞಾನ ಶಿಕ್ಷಕರಾದ ಶ್ರೀ ಆರ್ ಕೆ ಚೌಹ್ವಾಣ ಕಾರ್ಯಕ್ರಮ ನಿರೂಪಿಸಿದರು.