ಕುಮಟಾ : ಬಿಜೆಪಿಯಿಂದ ಆಯ್ಕೆಯಾದ ಕರ್ನಾಟಕದ ಸಂಸದರಿಗೆ ಅಭಿನಂದನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಕುಮಟಾ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆಯವರು ಭಾಗವಹಿಸಿ ಸಂತಸ ಹಂಚಿಕೊಂಡಿದ್ದಾರೆ.
ಬಿಜೆಪಿಯಲ್ಲಿ ಅತ್ಯುತ್ತಮ ಕಾರ್ಯಗಳ ಮೂಲಕ ಗುರುತಿಸಿಕೊಂಡ ನಾಗರಾಜ ನಾಯಕ ಮೋದಿಯವರ ಪ್ರಮಾಣವಚನ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದು ವಿಶೇಷ.
ಬಿಜೆಪಿ ಪಕ್ಷದ ಪ್ರಮುಖ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾಗರಾಜ ನಾಯಕ ತೊರ್ಕೆ ಪಕ್ಷದಲ್ಲಿ ಹೆಚ್ಚು ಹೆಚ್ಚು ಗುರ್ತಿಸಲ್ಪಡುತ್ತಿದ್ದಾರೆ.