ಮೇಷ:- ಬೆಣ್ಣೆಯಿಂದ ಕೂದಲು ತೆಗೆಯುವ ಕಲೆಯನ್ನು ತಿಳಿದುಕೊಳ್ಳಿ. ದುಷ್ಟರನ್ನು ಎದುರಿಸುವಂತಹ ಎದೆಗಾರಿಕೆ ಕೂಡ ಇರಲಿ. ಏಕೆಂದರೆ ವಿನಾಕಾರಣ ಜನರು ನಿಮ್ಮ ಮೇಲೆ ವಾಕ್‌ ಸಮರ ಮಾಡುವ ಸಾಧ್ಯತೆ ಇದೆ.


ವೃಷಭ:- ನಿಮ್ಮ ಕಾಯಕ, ಶ್ರಮಪೂರ್ಣ ದುಡಿಮೆ ಮುಂದುವರಿಸಿ. ಅದೃಷ್ಟದ ಸುವರ್ಣ ಸದೃಶ್ಯವಾದ ಮಿಂಚು ಗೋಚರಿಸಲಿದೆ. ಮಕ್ಕಳು ವಿದ್ಯಾಭ್ಯಾಸ ಅಥವಾ ನೌಕರಿ ವಿಷಯದಲ್ಲಿ ನಿರ್ದಿಷ್ಟ ಗುರಿ ಮುಟ್ಟುವರು.


ಮಿಥುನ:- ಅನುಮಾನ ಯಾವಾಗಲೂ ಎರಡು ಅಲುಗಿನ ಕತ್ತಿ ಇದ್ದಂತೆ. ವಿನಾಕಾರಣ ಪರರನ್ನು ಅನುಮಾನದ ದೃಷ್ಟಿಯಿಂದ ನೋಡದಿರಿ. ತಾರ್ಕಿಕ ಚಿಂತನೆಯಿಂದ ಅಲೌಕಿಕ ಶಕ್ತಿ ಸಂಪಾದಿಸುವಿರಿ.

ಕಟಕ:- ಶಾಂತಿ ಸಮಾಧಾನಗಳಿಂದ ಇರುವುದು ಕೂಡಾ ಒಂದು ಕಲೆ. ಒತ್ತಡದ ನಡುವೆಯೇ ಕ್ರಿಯಾಶೀಲತೆ ತೋರಿಸುತ್ತಾ ಎದುರಾಳಿಯನ್ನು ಗೆಲ್ಲುವಿರಿ. ದಿಢೀರನೆ ಪ್ರಯಾಣ ಎದುರಾಗುವ ಸಾಧ್ಯತೆ ಇದೆ.

RELATED ARTICLES  ಏ 10 ರಿಂದ 14 ವರೆಗೆ ರಾಮೋತ್ಸವ - ರಾಜ್ಯಮಟ್ಟದ ಕೃಷಿ ಉತ್ಸವ - ವಾರ್ಷಿಕ ಪ್ರಶಸ್ತಿ ಪ್ರದಾನ

ಸಿಂಹ:- ನೀವು ನಿಮ್ಮ ವರ್ತಮಾನದಲ್ಲಿ ಬರೀ ಬೋಳೆತನವನ್ನು ಪ್ರದರ್ಶಿಸುತ್ತಿದ್ದರೆ ಕಷ್ಟಗಳನ್ನೇ ಎದುರು ಹಾಕಿಕೊಳ್ಳುವಿರಿ. ಆದರೆ ಕೆಲವು ವಿಷಯಗಳಲ್ಲಿ ಗಟ್ಟಿ ನಿರ್ಧಾರ ತಳೆಯುವುದು ಒಳ್ಳೆಯದು. ಇದರಿಂದ ನಿಮಗೆ ಒಳಿತಾಗುವುದು.

ಕನ್ಯಾ:- ಬಿಕ್ಕಟ್ಟನ್ನು ತಂದಿಡುತ್ತಿದ್ದ ವಿಷಯಗಳು ಇದ್ದಕ್ಕಿದ್ದಂತೆ ಎಲ್ಲಾ ತೊಂದರೆಗಳಿಂದ ಹೊರಬಂದು ಸಫಲವಾಗಲಿವೆ. ಈ ದಿಢೀರ್‌ ಬದಲಾವಣೆ ನೀಡಿದ ಆ ದೈವಕ್ಕೆ ನೀವು ಕೃತಜ್ಞತೆ ಸಲ್ಲಿಸುವುದು ಒಳ್ಳೆಯದು.

ತುಲಾ:- ಕೇವಲ ತಾಳ್ಮೆಯೊಂದೇ ಪ್ರತಿಯೊಂದಕ್ಕೂ ಒಳಿತು ಕೆಡಕುಗಳ ಲೆಕ್ಕಾಚಾರ ಎಂದು ನಿಷ್ಕ್ರೀಯರಾಗದಿರಿ. ಧೈರ್ಯದಿಂದ ಮುನ್ನುಗ್ಗಿ. ಸಾಹಸವಂತ ಮತ್ತು ಧೈರ್ಯವಂತರಿಗೆ ಭಗವಂತನೂ ಆಶೀರ್ವಾದ ಮಾಡುವನು.

ವೃಶ್ಚಿಕ:- ನಿಯಂತ್ರಿಸಲು ಅಸಾಧ್ಯ ಎಂಬ ಮನಸ್ಥಿತಿಯಿಂದ ಹೊರಬನ್ನಿ. ಭಗವಂತನ ಅನುಗ್ರಹ ನಿಮ್ಮ ಮೇಲೆ ಆಗುತ್ತಿರುವುದರಿಂದ ಎಲ್ಲಾ ಕೆಲಸ ಕಾರ್ಯಗಳು ಸುಲಲಿತವಾಗಿ ಆಗುವವು.

RELATED ARTICLES  ಉತ್ತರಕನ್ನಡದಲ್ಲಿ ಮತ್ತೆ ಕೊರೋನಾ ಆರ್ಭಟ

ಧನುಸ್ಸು:- ನಿಮ್ಮ ರಾಶಿಯಲ್ಲಿಯೇ ಸಂಚರಿಸುವ ಶನಿಯ ಪ್ರಭಾವದಿಂದ ಕೆಲಸ ಕಾರ್ಯಗಳು ಮಂದಪ್ರಗತಿಯತ್ತ ಸಾಗುವವು. ಹಿರಿಯರಿಗೆ ಮಂಡಿನೋವು, ಕಾಲುನೋವು ಕಾಣಿಸಿಕೊಳ್ಳುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸುವುದರಿಂದ ಪರಿಹಾರವಾಗುವುದು.

ಮಕರ:- ಭವಸಾಗರ ದಾಟಿಸುವ ಶ್ರೀಮನೋಹರ ಅಚ್ಯುತನನ್ನು ಭಕ್ತಿಭಾವದಿಂದ ಸ್ತುತಿಸುವ ಮೂಲಕ ಚ್ಯುತಿ ಇರದಂತಹ ಖ್ಯಾತಿ ಗಳಿಸುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.

ಕುಂಭ:- ಎಷ್ಟೇ ಕತ್ತಲು ಇರಲಿ. ನಿಮಗೆ ಅನುಕೂಲವಾದ ಶನೈಶ್ಚರನ ಕರುಣೆಯಿಂದ ಮನಸ್ಸಿನ ಯೋಚನೆಗಳಿಗೆ ಸಿದ್ಧಿ ಇದೆ. ನೀವು ಹಮ್ಮಿಕೊಂಡಿರುವ ಯೋಜನೆಗೆ ನಿಮ್ಮ ಮೇಲಧಿಕಾರಿಗಳು ಸ್ಪಂದಿಸುವರು.

ಮೀನ:- ‘ಕಲೌದುರ್ಗೆ ವಿನಾಯಕೌ’ ಎಂದರು ಹಿರಿಯರು. ಹಾಗಾಗಿ ಈ ಕಲಿಯುಗದಲ್ಲಿ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ದುರ್ಗೆ ಆರಾಧನೆ ಮಾಡಿ. ಸಾಧ್ಯವಾದರೆ ದುರ್ಗಾಮಂದಿರಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬನ್ನಿ.