ಕುಮಟಾ: ಬಹು ನಿರೀಕ್ಷಿತ ಆಚೆ ಸೆಮಿಫೀಚರ್ ಫಿಲ್ಮ್ ಜೂನ್ ೧೦ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಹಾಗೂ ಉತ್ತರಕನ್ನಡ ಶಾರ್ಟ್ ಮೂವಿ ಕ್ಲಬ್‌ನ ಜಿಲ್ಲಾಧ್ಯಕ್ಷ ವಿನಾಯಕ ಬ್ರಹ್ಮೂರು ಅವರು ಹೇಳಿದ್ದಾರೆ.
ರಂಗಭೂಮಿಯ ಖ್ಯಾತ ಕಲಾವಿದರಾದ ದಯಾನಂದ ಬಿಳಗಿ ಹಾಗೂ ಹರೀಶ ಹಿರಿಯೂರ್ ನಟನೆಯ ಆಚೆ ಚಿತ್ರಕ್ಕೆ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಇದೇ ಬರುವ ಜೂನ್೧೦ರಂದು ಚಿತ್ರ ಯೂಟ್ಯೂಬ್‌ನಲ್ಲಿ ಸಿಗಲಿದೆ ಎಂದು ನಿರ್ದೇಶಕ ವಿನಾಯಕ ಬ್ರಹ್ಮೂರು ತಿಳಿಸಿದ್ದಾರೆ.
ಇಬ್ಬರು ಖ್ಯಾತನಾಮರ ನಟನೆ ಮತ್ತು ಡೈಲಾಗ್ಸ್‌ಗಳೇ ಚಿತ್ರದ ಹೈಲೈಟ್ ಅಂತ ಹೇಳಲಾಗ್ತಿದೆ. ಚಿತ್ರಕ್ಕೆ ವಿಕ್ರಮ ನಾಯ್ಕ ಸಂಕಲನವಿದೆ. ಸುನೀಲ ಹೆಗಡೆ ತಟ್ಟೀಸರ ಹಾಗೂ ಅನಂತ ಮನದೂರ್ ಅವರ ಛಾಯಾಗ್ರಹಣವಿದೆ.