ಅಂಕೋಲಾ: ಯಕ್ಷ ಮಿತ್ರರು ಅಂಕೋಲಾ ಇವರ ಸಂಯೋಜನೆಯಲ್ಲಿ ಮಳೆಗಾಲದಲ್ಲಿ ಒಂದು ಯಕ್ಷ ಸಂಜೆ ಕಾರ್ಯಕ್ರಮ ಇದೇ ಬರುವ ಜೂನ್ 9 ರ ಸಂಜೆ 5 ಗಂಟೆಗೆ ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ ಅಂಕೋಲಾದಲ್ಲಿ ನಡೆಯಲಿದೆ.

   ಬಹುಜನರ ನಿರೀಕ್ಷೆಯ ಮೇರೆಗೆ  ಪಟ್ಲ ಸತೀಶ ಶೆಟ್ಟಿ ಮತ್ತೊಮ್ಮೆ ಅಂಕೋಲಾದಲ್ಲಿ ಕಾಣಿಸಿಕೊಂಡರೆ ಶ್ರೀ ಸುಭ್ರಹ್ಮಣ್ಯ ಧಾರೇಶ್ವರ ಮಿಂಚಲಿದ್ದಾರೆ.ಇವರ ಜೊತೆಗೆ ರಾಮಕೃಷ್ಣ ಹಿಲ್ಲೂರು, ಮದ್ದಲೆಯಲ್ಲಿ ಶ್ರೀ ಪದ್ಮನಾಭ ಉಪಾದ್ಯಾಯ, ಶ್ರೀ ಎನ್.ಜಿ.ಹೆಗಡೆ, ಚಂಡೆಯಲ್ಲಿ ಗುರು ಪ್ರಸಾದ ಗೋವಿನಜಟಕ,ಗಣೇಶ ಗಾಂವಕರ್ ಇರಲಿದ್ದಾರೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

    ಮುಮ್ಮೇಳದಲ್ಲಿ ಶ್ರೀ ಅಶೋಕ ಭಟ್ಟ ಉಜರೆ, ರಾಮಚಂದ್ರ ಹೆಗಡೆ ಕೊಂಡದಕುಳಿ, ಪ್ರಕಾಶ ಕೆರಾಡಿ, ವಿಶ್ವನಾಥ ಆಚಾರ್ಯ, ಸುದೀರ ಉಪ್ಪುರು, ನಾಗರಾಜ ಭಂಡಾರಿ,ರಾಘು ಕಾಕನಮಕ್ಕಿ,ಉದಯ ಕಡಬಾಳ, ರಕ್ಷಿತ್ ಶೆಟ್ಟಿ, ಸನ್ಮಯ ಭಟ್ಟ, ಆನಂದ ಭಟ್ಟ ಕೆಕ್ಕಾರು ಹಾಗೂ ಹಾಸ್ಯದಲ್ಲಿ ಶ್ರೀಧರ ಭಟ್ಟ ಕಾಸರಕೋಡ ಜನರನ್ನು ರಂಜಿಸಲಿದ್ದಾರೆ.

RELATED ARTICLES  ಬೈಪಾಸ್ ನಿರ್ಮಿಸುವ ಸಂಬಂಧ ಪೊಲೀಸ್ ಸರ್ಪಗಾವಲಿನಲ್ಲಿ ಸರ್ವೆ : ಪ್ರತಿಭಟನೆ

   ಯಕ್ಷ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮಕ್ಕೆ ಸಹಕರಿಸುವಂತೆ ವಿನಂತಿಸಿದ್ದಾರೆ.