ಕುಮಟಾ: ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಒಟ್ಟೂ 14 ಮಂದಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಆರೋಗ್ಯ ಪರಿಹಾರ ನಿಧಿಯಡಿ ಮಂಜೂರಾದ 5,58,601 ರೂ.ಗಳ ಚೆಕನ್ನು ಶಾಸಕ ದಿನಕರ ಶೆಟ್ಟಿ ಇಂದು ತಹಶೀಲ್ದಾರರ ಕಾರ್ಯಾಲಯದಲ್ಲಿ ವಿತರಿಸಿದರು.
ಫಲಾನುಭವಿಗಳಾದ ಪರಮೇಶ್ವರ ಎನ್ ಮಡಿವಾಳ ಚಂದಾವರ, ಜಯಂತಿ ಅಂಬಿಗ ಹಡಿನಬಾಳ, ನಾರಾಯಣ ಸುಬ್ರಾಯ ಹೆಗಡೆ ಹೊಸಾಕುಳಿ, ಗೋಪಿ ಚಂದ್ರಕಾಂತ ಗೌಡ ಗೋಕರ್ಣ, ರಾಮಾ ಮಂಜುನಾಥ ಹರಿಕಂತ್ರ ಹಳದೀಪುರ, ಗಜಾನನ ಮಂಜುನಾಥ ಭಟ್ಟ ವಾಲಗಳ್ಳಿ, ಅನುರಾಧಾ ದಿನೇಶ ಭಂಡಾರಿ ಮಣಕಿ, ತಿಮ್ಮಕ್ಕ ಬೀರಾ ಗೌಡ ನೆಹರುನಗರ, ಶಿವಮ್ಮ ಲಕ್ಷ್ಮಣ ಹಳ್ಳೇರ ಹಿರೇಗುತ್ತಿ, ದೇವು ಜಟ್ಟು ಗೌಡಅರಸಾಮಿಕೆರೆ, ವೆಂಣಕಟೇಶ ಅಂಬಿಗ ಮಿರ್ಜಾನ, ವಿಠ್ಠಲ ನಾಯ್ಕ ಕೋಡ್ಕಣಿ, ತಿಮ್ಮಣ್ಣ ಭಟ್ಟ, ಶಾಂತಿ ಹರಿಕಂತ್ರ ಇವರುಗಳು ಶಾಸಕರಿಂದ ಚೆಕ್ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಬಡವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಸಾಧ್ಯವಿದ್ದಷ್ಟು ಹೆಚ್ಚಿನ ನೆರವು ಒದಗಿಸುವ ಮೂಲಕ ಅವರ ಕಷ್ಟದ ಕಾಲಕ್ಕೆ ಸಹಾಯ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ನಿರಂತರ ಮಾಡಿಕೊಂಡು ಬಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಗಜಾನನ ಪೈ, ಬಿಜೆಪಿ ಮುಖಂಡರಾದ ರಾಧಾಕೃಷ್ಣ ಕೃಷ್ಣ ಗೌಡ, ವಿನಾಯಕ ನಾಯ್ಕ, ಸುಧೀರ ಗೌಡ, ಚೇತೇಶ ಶಾನಭಾಗ ಇತರರು ಇದ್ದರು.