ಹೊನ್ನಾವರ: ‘ಕುಮಟಾ- ವಿಧಾಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧೆಡೆಗಳಲ್ಲಿ ರಸ್ತೆ ಹಾಗೂ ಸೇತುವೆ ಕಾಮಗಾರಿಗಾಗಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಒಟ್ಟು ₹ 39.36 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಶಾಸಕಿ ಶಾರದಾ ಶೆಟ್ಟಿ ತಿಳಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

‘ಐಗಾರಮಕ್ಕಿ –ಜನಸಾಲೆ– ಹೊಯ್ನೀರು ರಸ್ತೆ ಮತ್ತು ಸೇತುವೆಗೆ ₹ 3.6ಕೋಟಿ, ಗುಡ್ಡೇಬಾಳ– ಗಾಣಗೇರಿ– ಕವಲಕ್ಕಿ ರಸ್ತೆಗೆ ₹ 4.7 ಕೋಟಿ, ಸಂತೇಗುಳಿ ಲಕ್ಷ್ಮಿ ನರಸಿಂಹ ದೇವಸ್ಥಾನ– ಬಾಸ್ಕೇರಿ –ಆರೊಳ್ಳಿ ರಸ್ತೆಗೆ ₹ 3.29 ಕೋಟಿ, ಕಡತೋಕಾ–ಗುಡ್ಡಿನಕಟ್ಟು– ಊರಕೇರಿ ರಸ್ತೆ ಹಾಗೂ ಸೇತುವೆಗೆ ₹ 3.85 ಕೋಟಿ, ಕೆಕ್ಕಾರ ಚರ್ಚ್ ಕ್ರಾಸ್‌– ಗೌಡ್ರಕೇರಿ ಸೋನಾರಕೇರಿ ರಸ್ತೆಗೆ ₹ 3.43 ಕೋಟಿ ಬಿಡುಗಡೆಯಾಗಿದೆ’ ಎಂದರು.

RELATED ARTICLES  ಏಕತಾ ಭಟ್ಟ ಗೆ ಐದು ಚಿನ್ನದ ಪದಕ.

‘ಕರ್ಕಿ– ಕೆಳಗಿನಕೇರಿ–ರಾಮೇಶ್ವರ ಕಂಬಿ ರಾಷ್ಟ್ರೀಯ ಹೆದ್ದಾರಿವರೆಗಿನ ರಸ್ತೆಗೆ ₹ 3.13 ಲಕ್ಷ, ಕುಮಟಾದ ಗಂಗಾವಳಿ ಕ್ರಾಸ್– ಹರಿಜನ ಕಾಲೋನಿ– ಶಾಂತಿಕಾಪರಮೇಶ್ವರಿ ದೇವಸ್ಥಾನ ರಸ್ತೆಗೆ ₹ 1.34 ಕೋಟಿ, ಕಾಯ್ಕಿಣಿ –ಶಿವಪುರ– ರಾಷ್ಟ್ರೀಯ ಹೆದ್ದಾರಿ 66ರ ವರೆಗಿನ ರಸ್ತೆಗೆ ₹ 2.12 ಕೋಟಿ, ಕುರಿಗದ್ದೆ ಹರಿಜನಕೇರಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ವರೆಗಿನ ರಸ್ತೆಗೆ ₹ 1.62 ಕೋಟಿ, ಬೆಟ್ಕುಳಿಯ ಹರ್ಣಿಕೇರಿ– ಹೆದ್ದಾರಿ ರಸ್ತೆಗೆ ₹ 1.34 ಕೋಟಿ, ಮುಖ್ಯರಸ್ತೆಯಿಂದ ಕರ್ಕಿಮಕ್ಕಿ ರಸ್ತೆಗೆ ₹ 2.62ಕೋಟಿ ಮಂಜೂರಾಗಿದೆ’ ಎಂದರು.

RELATED ARTICLES  ಮಾರ್ಚ.13 ರವರೆಗೆ ಮಳೆ ಸಾಧ್ಯತೆ : ಇಲಾಖೆಯ ಸೂಚನೆ

‘ಮುರೂರು– ಜನಸಾಲೆ ರಸ್ತೆಗೆ ₹ 1.38 ಕೋಟಿ, ಕಪ್ಪೆಗುಳಿ– ಸಂತೂರು– ಸಗಡೆಬೇಣಾ– ಬಂಡಿವಾಳ ರಸ್ತೆಗೆ ₹ 1.78 ಕೋಟಿ, ಗುಡಬಳ್ಳಿ– ಹರನೀರು ರಸ್ತೆಗೆ ₹ 1.88 ಕೋಟಿ, ಮೇಲಿನ ತಲಗೋಡ– ಹೊಸಹಿತ್ಲ– ಹರಿಜನಕೇರಿ– ವಾಲಗಳ್ಳಿಯಿಂದ –ರಾಜ್ಯ ಹೆದ್ದಾರಿ ರಸ್ತೆಗೆ ₹ 3.83 ಕೋಟಿ ಹಣ ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.
ಪಾವಿನಕುರ್ವೆ ಸೇತುವೆಗೆ ₹ 10 ಕೋಟಿ ಪ್ರಸ್ತಾವನೆ ಕಳಿಸಲಾಗಿದೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿರುವ ₹ 20 ಕೋಟಿಯಲ್ಲಿ ಕಾಲುಸಂಕ, ಮೀನುಮಾರುಕಟ್ಟೆ ಕಾಮಗಾರಿಗಾಗಿ ಜಿಲ್ಲಾವಾರು ಹಣ ನೀಡಲಾಗುತ್ತಿದ್ದು ಉತ್ತರ ಕನ್ನಡ ಜಿಲ್ಲೆಗೆ ಅತೀ ಹಚ್ಚು ನೀಡುವ ಭರವಸೆ ನೀಡಿದರು.