ಭಟ್ಕಳ: ಇಲ್ಲಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಶಿಶು ಅಭಿವೃದ್ಧಿ ಯೋಜನೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಭಾಗ್ಯಲಕ್ಷ್ಮಿ  ಬಾಂಡ 
ವಿತರಣಾ ಕಾರ್ಯಕ್ರಮ ನಡೆಯಿತು.

   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಸಮಾಜದಲ್ಲಿ ತಲತಲಾಂತರದಿಂದ ರೂಡಿಯಲ್ಲಿರುವ ಮೂಡನಂಬಿಕೆಗಳಲ್ಲಿ ಹೆಚ್ಚಿನವು ಒಳಗೊಳ್ಳುವುದು ಮಹಿಳೆಯನ್ನು. ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಪ್ರಮುಖವಾಗಿ ಸಮಾಜದ ಪುರುಷ ಪ್ರದಾನ ಪ್ರವೃತ್ತಿ. ಇದರಿಂದ  ಹುಟ್ಟಿದ ಮೂಡನಂಬಿಕೆಗಳಿಗೆ ಹೆಣ್ಣೆ ಮುಖ್ಯವಾಗಿ ಗುರಿಯಾಗುತ್ತಿದ್ದಾಳೆ, ಮಾನವ ಜನ್ಮದಲ್ಲಿಯೇ ಹೆಣ್ಣಿನ ಜನ್ಮ ಶ್ರೇಷ್ಠವಾದಂತಹ ಜನ್ಮ. ಹೆಣ್ಣು ಮಗು ಹುಟ್ಟಿದರೆ ಅದು ಶಾಪವಲ್ಲ, ಬದಲಾಗಿ ವರ ಎಂದು ಖಚಿತಪಡಿಸಲು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಆಗಿನ ಸರ್ಕಾರ 2006-07 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು ಎಂದರು.

RELATED ARTICLES  ಭಾರತ್ ಬಂದ್ ಹಿನ್ನೆಲೆ : ಕುಮಟಾದಲ್ಲಿಯೂ ಮೆರವಣಿಗೆ ಮೂಲಕ ಮನವಿ ಸಲ್ಲಿಕೆ

ಈ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಕಿ ಉಳಿದಿದ್ದ, ಭಟ್ಕಳ ತಾಲ್ಲೂಕಿನ ಸರಿ ಸುಮಾರು 350 ಭಾಗ್ಯಲಕ್ಷ್ಮಿ ಯೋಜನೆಯನ್ನು ಬಾಂಡ್ ಅನ್ನು ಇಂದು ಫಲಾನುಭವಿಗಳಿಗೆ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ಬಾಕಿ ಇರುವ ಬಾಂಡಗಳನ್ನು ಫಲಾನುಭವಿಗಳಿಗೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

RELATED ARTICLES  ಚಂದ್ರ ಗ್ರಹಣದ ನಿಮಿತ್ತ ಗೋಕರ್ಣ ದೇವಾಲಯದ ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆ.

ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾ.ಪ.ಸದಸ್ಯ ಹನುಮಂತ ನಾಯ್ಕ, ವಹಿಸಿದರು.