ಭಟ್ಕಳ: ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಉತ್ಸಾಹಿ ಯುವಕರು ನಮ್ಮ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಭಿಯಾನ ಆರಂಭಿಸಿರುವುದು ಸ್ವಾಗತರ್ಹ ಹಾಗೂ ಅಭಿನಂದನಾರ್ಹವಾದದ್ದು ಎಂದು ಮಾಜಿ ಶಾಸಕಮಂಕಾಳ ವೈದ್ಯ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮಲ್ಲಿ ಅಪಘಾತ ಆದಾಗ ದೂರದ ಕುಂದಾಪುರ ಹಾಗೂ ಮಣಿಪಾಲ ಅಥವಾ ಮಂಗಳೂರಿಗೆ ಹೋಗುವ ಸಂದರ್ಭದಲ್ಲಿ ಎಷ್ಟು ಅಮೂಲ್ಯ ಜೀವಿಗಳು ಕಳೆದುಕೊಂಡಿರುವುದು ನಿಜ. ಇದು ತುಂಬಾ ವಿಷಾದದ ಸಂಗತಿ ನಮ್ಮಲ್ಲಿ ಇಂತಹ ಸುಸಜ್ಜಿತ ಆಸ್ಪತ್ರೆಯಿಂದರೇ ಎಷ್ಟೋ ಅಮೂಲ್ಯ ಜೀವಿ ಉಳಿಯುತ್ತಿತ್ತು.
ನಮ್ಮ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವ ಕುರಿತು ಜಿಲ್ಲೆಯ ಉಸ್ತುವಾರಿ ಸಚಿವರ ಜೊತೆ ಹಾಗೂ ಆರೋಗ್ಯ ಸಚಿವರ ಜೊತೆ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಜೊತೆ ಯಲ್ಲಿ ಸನ್ಮಾನ ಸಿದ್ದರಾಮಯ್ಯರವರ ಜೊತೆಯಲ್ಲಿ ಮಾತನಾಡಿ ಅತಿ ಶೀಘ್ರದಲ್ಲಿ ನಮ್ಮ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊ ತೆಯಲ್ಲಿ, ನನ್ನಿಂದ ಆಗುವ ಎಲ್ಲಾ ಸಹಾಯ ಸಹಕಾರ ನೀಡುತ್ತೇನೆ.
ಈ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಅಂತ ಅಭಿಯಾನ ಆರಂಭಿಸಿದ ನಮ್ಮ ಜಿಲ್ಲೆಯ ಎಲ್ಲಾ ಯುವಕರಿಗೆ ಧನ್ಯವಾದಗಳು ತಿಳಿಸುತ್ತೇನೆ ನಮ್ಮಿಂದ ನಿಮಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತೇನೆ ಅಂತ ಸಹ ಭರವಸೆ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.