ಮೇಷ ರಾಶಿ
ಇವತ್ತು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಲಿದೆ. ನೆಗಡಿ, ಕಫ ಮತ್ತು ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೇರೆಯವರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ಹಣಕಾಸಿನ ವಹಿವಾಟು ಮಾಡಬೇಡಿ.
ವೃಷಭ ರಾಶಿ
ಇವತ್ತು ನಿಮಗೆ ಶುಭ ದಿನ. ಧನವೃದ್ಧಿ ಹಾಗೂ ಪದೋನ್ನತಿಯ ಯೋಗವಿದೆ. ಉದ್ಯಮದಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಲಾಭವಾಗಲಿದೆ. ಕುಟುಂಬದವರು ಮತ್ತು ಸ್ನೇಹಿತರ ಜೊತೆ ಆನಂದವಾಗಿ ಕಾಲ ಕಳೆಯಲಿದ್ದೀರಿ.
ಮಿಥುನ ರಾಶಿ
ಇಂದು ನಿಮ್ಮ ಪಾಲಿಗೆ ಅನುಕೂಲಕರ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಉತ್ತಮ ಬಾಂಧವ್ಯವಿರಲಿದೆ. ಸಾಮಾಜಿಕ ಕ್ಷೇತ್ರಗಳಲ್ಲೂ ನಿಮ್ಮ ಗೌರವ ಹೆಚ್ಚಾಗಲಿದೆ. ಪದೋನ್ನತಿ ದೊರೆಯುವ ಸಾಧ್ಯತೆ ಇದೆ.
ಕರ್ಕ ರಾಶಿ
ಇವತ್ತು ನೀವು ಪೂಜೆ, ಧ್ಯಾನ ಸೇರಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಕುಟುಂಬದವರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತೀರಿ. ಆರೋಗ್ಯವೂ ಸುಧಾರಿಸಲಿದೆ. ಮನಸ್ಸು ಕೂಡ ಚಿಂತೆ ರಹಿತವಾಗಿರಲಿದೆ. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಇದೆ.
ಸಿಂಹ ರಾಶಿ
ಇವತ್ತು ಸ್ವಲ್ಪ ಜಾಗರೂಕರಾಗಿರಿ. ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಿ. ಆರೋಗ್ಯ ಬಿಗಡಾಯಿಸುವುದರಿಂದ ಆಕಸ್ಮಿಕವಾಗಿ ಆರ್ಥಿಕ ಖರ್ಚು ಕೂಡ ಹೆಚ್ಚುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಸಾಮಾಜಿಕ ಮತ್ತು ಇತರ ಕ್ಷೇತ್ರಗಳಲ್ಲಿ ಗೌರವ ಮತ್ತು ಖ್ಯಾತಿ ಸಿಗಲಿದೆ. ಸುಂದರ ಬಟ್ಟೆಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ವಾಹನ ಸುಖ ಪ್ರಾಪ್ತಿಯಾಗಲಿದೆ. ಪಾಲುದಾರರ ಜೊತೆಗೆ ಬಾಂಧವ್ಯ ಉತ್ತಮವಾಗಿರಲಿದೆ. ಪತಿ-ಪತ್ನಿ ನಡುವಣ ಮುನಿಸು ದೂರವಾಗಲಿದೆ.
ತುಲಾ ರಾಶಿ
ಮನೆಯಲ್ಲಿ ಸುಖ-ಶಾಂತಿಯ ವಾತಾವರಣವಿರಲಿದೆ. ನಿಮ್ಮ ಮನಸ್ಸು ಕೂಡಾ ಪ್ರಸನ್ನವಾಗಿರಲಿದೆ. ಸಹೋದ್ಯೋಗಿಗಳ ಜೊತೆಗೂಡಿ ಮಹತ್ವದ ಕಾರ್ಯ ಮಾಡಲಿದ್ದೀರಿ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ.
ವೃಶ್ಚಿಕ ರಾಶಿ
ಇವತ್ತಿನ ದಿನ ನಿಮಗೆ ಮಧ್ಯಮ ಫಲದಾಯಿಯಾಗಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಫಲತೆ ಸಿಗಲಿದೆ. ಹೊಸ ಕಾರ್ಯವನ್ನು ಆರಂಭಿಸಬೇಡಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಧನು ರಾಶಿ
ಇವತ್ತು ಮನಸ್ಸು ಸ್ವಲ್ಪ ಉದಾಸೀನವಾಗಿರಲಿದೆ. ಶರೀರದಲ್ಲಿ ಸ್ಪೂರ್ತಿ ಮತ್ತು ಪ್ರಫುಲ್ಲತೆಯ ಅಭಾವ ಇರುತ್ತದೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು, ಎಚ್ಚರಿಕೆಯಿಂದಿರಿ. ಧನಹಾನಿಯಾಗಬಹುದು.
ಮಕರ ರಾಶಿ
ಹೊಸ ಕೆಲಸ ಆರಂಭಿಸಲು ಇವತ್ತು ಶುಭ ದಿನ. ನೌಕರಿ, ವ್ಯಾಪಾರ ಮತ್ತು ದೈನಿಕ ಕಾರ್ಯಗಳಲ್ಲಿ ಅನುಕೂಲಕರ ವಾತಾವರಣವಿರುವುದರಿಂದ ಮನಸ್ಸು ಪ್ರಫುಲ್ಲವಾಗಿರಲಿದೆ. ಒಡಹುಟ್ಟಿದವರು ಮತ್ತು ಸಂಬಂಧಿಗಳಿಂದ ಸಹಕಾರ ಸಿಗಲಿದೆ.
ಕುಂಭ ರಾಶಿ
ಇವತ್ತು ನಿಮ್ಮ ಮನಸ್ಸು ಪ್ರಫುಲ್ಲವಾಗಿರಲಿದೆ. ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಗಮನ ಹರಿಸಲಿದ್ದೀರಿ. ನಕಾರಾತ್ಮಕತೆ ಕಾಡಬಹುದು, ಅದನ್ನು ಮನಸ್ಸಿನಿಂದ ಕಿತ್ತು ಹಾಕಿ. ಮಾತು ಹದ್ದು ಮೀರದಂತೆ ಎಚ್ಚರ ವಹಿಸಿ.
ಮೀನ ರಾಶಿ
ಇವತ್ತು ನಿಮಗೆ ಶುಭ ದಿನ. ಉತ್ಸಾಹ ಹಾಗೂ ಆರೋಗ್ಯ ಎರಡೂ ಚೆನ್ನಾಗಿರಲಿದೆ. ಹೊಸ ಕಾರ್ಯವನ್ನು ಆರಂಭಿಸಲು ಸಮಯ ಸೂಕ್ತವಾಗಿದೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಭೋಜನ ಮಾಡಲಿದ್ದೀರಿ. ಧನಲಾಭವೂ ಇದೆ.