ಬೆಂಗಳೂರು: ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಇಂದು ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಾರ್ನಾಡ್​ ಕಳೆದ ಹಲವು ದಿನಗಳಿಂದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

   ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಲ್ಯಾವೆಲ್ಲಿ ರೋಡ್​ ನಲ್ಲಿರುವ ನಿವಾಸದಲ್ಲಿ ಕಾರ್ನಾಡ್​ ಕೊನೆ ಉಸಿರೆಳೆದಿದ್ದಾರೆ.  ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಪರಿಗಣಿಸಿ ಪದ್ಮ ಶ್ರೀ, ಪದ್ಮಭೂಷಣ, ಜ್ಞಾನಪೀಠ ​ ಸೇರಿ ಅನೇಕ ಪ್ರಶಸ್ತಿಗಳು ಲಭ್ಯವಾಗಿದ್ದವು.

RELATED ARTICLES  ವೀಕೆಂಡ್ ಕರ್ಫ್ಯೂ : ಜಿಲ್ಲೆಯಲ್ಲಿ ಏನೆಲ್ಲಾ ನಿಯಮ ಇದೆ ಗೊತ್ತೇ?

    19 ಮೇ 1938ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದ್ದ ಕಾರ್ನಾಡ್​, ನಟನೆ, ರಂಗಭೂಮಿ, ನಿರ್ದೇಶನ ಹಾಗೂ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ನಂತರ ಧಾರವಾಡ ತೆರಳಿದರು. ಅಲ್ಲಿ ಅವರು ಕಲಾ ಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದರು. ನಂತರ ಇಂಗ್ಲೆಂಡ್​ಗೆ ತೆರಳಿದ ಅವರು ತತ್ವಶಾಸ್ತ್ರ ಅಧ್ಯಯನ ಮಾಡಿದರು. ಆಕ್ಸ್​ಫರ್ಡ್​ನಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ನಡೆಸಿದರು.ಮಾ ನಿಷಾಧ- ಏಕಾಂಕ ನಾಟಕ, ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ಒಡಕಲು ಬಿಂಬ, ಮದುವೆ ಅಲ್ಬಮ್, ಫ್ಲಾವರ್ಸ, ಬೆಂದ ಕಾಳು ಆನ್ ಟೋಸ್ಟ ಇದು ಅವರು ಬರೆದ ನಾಟಕಗಳು.  ಸಾಹಿತ್ಯ ಲೋಕ, ಚಿತ್ರರಂಗ ಹಾಗೂ ರಂಗಭೂಮಿ ಕಲಾವಿದರು, ರಾಜಕಾರಣಿಗಳು ಗಿರೀಶ್​ ಕಾರ್ನಾಡ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.



RELATED ARTICLES  ಕುಮಟಾ : ಅಪಾಯದಿಂದ ಪಾರಾದ ಬಾಲಕ