ಬದುಕಿನಾಚೆಗೆ ಏನಿದೆ ?! ಬದುಕನ್ನು ತೊರೆದು ಹೋದವನ ಹೊರತುಪಡಿಸಿ ಉಳಿದವರ ಬದುಕಲ್ಲಿ ಎಲ್ಲವೂ ಇದೆ ಅದು ಯಾವತ್ತಿದ್ದರೂ ಸತ್ಯ ನಮ್ಮ ನಿರ್ಗಮನದ ನಂತರ ಏನಾಗಬಹುದು ಎಂಬ ಕುತೂಹಲ ಸಹಜ,ಆದರೆ ?! ಕರಾರುವಕ್ಕಾದ ಕಲ್ಪನೆ ಅವನು ಅರಿಯಲಾರ
ನಾವಿಂದು ಹೇಗೆ ಜೀವಿಸುತ್ತಿದ್ದೇವೆ ಜೀವಿಸಿದ್ದೇವೆ ಅನ್ನುವದಷ್ಟೇ ಸತ್ಯ ನಮ್ಮಾಚೆಗೂ ಬರುವದು ನಮ್ಮ ಜತನದಿಂದ ಕಾಪಿಡುವದು ನಮ್ಮ ಒಳ್ಳೆಯತನಗಳೇ ಹೊರತೂ ಹಾಳು ಅಹಂಕಾರವಾಗಲೀ ಕೆಟ್ಟ ತನಗಳಾಗಲೀ ಅಲ್ಲ
ಆಚೆ ಎನ್ನುವ ಶೀರ್ಷಿಕೆ ಯಡಿ ಬದುಕಿನಾಚೆಯ ನಗ್ನ ಸತ್ಯವನ್ನು ತೋರಿಸುತ್ತಾ ಕಣ್ಣಾರೆ ಕಂಡರೂ ಪರಂಬರಿಸಿ ನೋಡು ಎನ್ನುತ್ತ ಚಿತ್ರ ರೂಪಗೊಂಡಿದೆ
ಮಧ್ಯಂತರದಲ್ಲಿ ಬಂದು ಹೋಗುವ ಹಲವು ಮಾತುಗಳು ಮನಸು ತಟ್ಟುತ್ತವೆ ಮತ್ತು ವಾಸ್ತವಿಕವಾದ ಚಿತ್ರಣವನ್ನು ಕಟ್ಟಿ ಕೊಡುತ್ತದೆ.
ಒಂದು ಸೂಕ್ಷ್ಮ ನೆಲೆಗಟ್ಟಿನಲ್ಲಿ ಆಚೆ ಚಿತ್ರ ಮೂಡಿಬಂದಿದೆ
ಒಂದು ಸಂದೇಶ ದೊಂದಿಗೆ ಜನ ಮನ ತಟ್ಟುತ್ತಿರುವ
ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುವ ವಿನಾಯಕ ಬ್ರಹ್ಮೂರರಿಗೆ ಅಭಿಂದನೆಗಳು
ಒಮ್ಮೆ ನೋಡಿ ಈ ಚಿತ್ರ
ಇಲ್ದೇ ಹೋದ್ರೆ ಬ್ರಹ್ಮೂರರ ಒಂದಿಷ್ಟು ಡೈಲಾಗ್ ಗಳನ್ನು ಮಿಸ್ ಮಾಡ್ಕೋತೀರಾ..
ಸ್ಮಿತಾ ರಾಘವೇಂದ್ರ