ಶಿರಸಿ : ದ್ವಿಚಕ್ರ ವಾಹನವನ್ನು ಅತಿಯಾದ ಚಲಾಯಿಸುತ್ತಿದ್ದ ಯುವಕನೊರ್ವ ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಶಿರಸಿ ನಗರದಲ್ಲಿ ನಡೆದಿದೆ.
ಆಸಿಫ್ ಶುಕುರ್ ಶೇಖ್ ಎಂಬ ಯುವಕ ದ್ವಿಚಕ್ರ ವಾಹನವನ್ನು ಅತಿಯಾದ ಚಲಾಯಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಶಿರಸಿ ನಗರದ ಝೂ ಸರ್ಕಲ್ ಬಳಿ ತಾಯಿಯೊಂದಿಗೆ ಅತಿ ವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ತಲೆ ನೆಲಕ್ಕೆ ಜಜ್ಜಿದ ಕಾರಣ ಸ್ಥಳದಲ್ಲೇ ಆಸಿಫ್ ಶುಕುರ್ ಶೇಖ್ ಎಂಬ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದೆ.