ಕಾರವಾರ: ಪ್ರಗತಿಪರ ಚಿಂತಕ, ನಿಷ್ಠುರತೆ ಮತ್ತು ಬದ್ಧತೆಗೆ ಹೆಸರಾದ ಹಿರಿಯ ಸಾಹಿತಿ ಡಾ. ಗಿರೀಶ ಕಾರ್ನಾಡ ಅವರ ಅಗಲಿಕೆ ನೋವು ತಂದಿದೆ. ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಾರ್ನಾಡರು ಪುರಾಣ ಬಳಸಿ ಯಯಾತಿ ಬರೆದರೆ, ಇತಿಹಾಸ ಬಳಸಿ ತುಘಲಕ್ ನೀಡಿದರು. ಜಾನಪದ ತಂತ್ರಗಳನ್ನು ಬಳಸಿ ಹಯವದನ ಕಟ್ಟಿಕೊಟ್ಟರು. ಹೀಗೆ ತಮ್ಮ ಸಾಹಿತ್ಯಕ್ಕೆ ಸಿಕ್ಕ ಎಲ್ಲ ಒರತೆಗಳನ್ನು ದುಡಿಸಿಕೊಂಡಿರುವುದು ಅವರ ಸೃಜನಶೀಲತೆಯ ತಾಕತ್ತು ಮತ್ತು ಹರಿತ ಚಿಂತನೆಯನ್ನು ಗುರುತಿಸುವಂತಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದ್ದಾರೆ.

RELATED ARTICLES  ಇನ್ಸ್ಪೈರ್ ಅವಾರ್ಡ್ : ಹೆಗಡೆಯ ರೇವತಿ ಮುಕ್ರಿ ರಾಷ್ಟ್ರಮಟ್ಟಕ್ಕೆ ಆಯ್ಕೆ


ಕಾರ್ನಾಡ್ ಅವರ ಕೃತಿಗಳನ್ನು ಮರು ಓದವುದರ ಮೂಲಕ ಅವರಿಗೆ ಗೌರವಸಲ್ಲಿಸಬೇಕು ಎಂದು ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ವೆಂ.ಭ.ವಂದೂರು ನಿಧನಕ್ಕೆ ಸಂತಾಪ : ಹಿರಿಯ ಕವಿ ವೆಂ.ಭ ವಂದೂರು ಅವರು ಭಾನುವಾರ ನಿಧನರಾಗಿದ್ದು ಓರ್ವ ಸಶಕ್ತ ಬರಹಗಾರನನ್ನು ಜಿಲ್ಲೆ ಕಳೆದುಕೊಂಡಂತಾಗಿದೆ. ಭಾಮಿನಿಷಟ್ಪದಿಯಲ್ಲಿ ಅವರ ಕಾವ್ಯ ಕಸುಬು ಪರಿಣಾಮಕಾರಿಯಗಾಗಿತ್ತು. ಅವರ ಕೃತಿಗಳು ಅಧ್ಯಯನಯೋಗ್ಯವಾಗಿದ್ದವು ಎಂದು ಉತ್ತರ ಕನ್ನರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು ಒಂದೇ ದಿನ 100 ಕೊರೋನಾ ಕೇಸ್..!