ಕುಮಟಾ: ಪಟ್ಟಣದ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯಲ್ಲಿ ಪ್ರಾರಂಭಗೊಂಡ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ್ನು ಶಾಸಕರಾದ ದಿನಕರ ಶೆಟ್ಟಿಯವರು ಉದ್ಘಾಟಿಸಿದರು.

    ಕನ್ನಡ ಮಾತೃಭಾಷೆಯಾದರೂ, ಆಧುನಿಕ ಯುಗಕ್ಕೆ ತಕ್ಕಂತೆ ಇಂಗ್ಲಿಷ್ ಕಲಿಯುವುದು ಅನಿವಾರ್ಯ. ಈ ಯೋಜನೆಯಿಂದ ಬಡವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಶಿಕ್ಷಣಾಧಿಕಾರಿಗಳು ಇಲ್ಲಿನ ಕೊಠಡಿಗಳ ಬಗೆಗೆ ಹೆಚ್ಚಿನ ಮುತುವರ್ಜಿವಹಿಸಬೇಕಾದ ಅನಿವಾರ್ಯತೆಯಿದೆ. ಶಿಕ್ಷಕರು ಉತ್ತಮ ಗುಣಮ್ಟದ ಶಿಕ್ಷಣ ಒದಗಿಸುವಲ್ಲಿ ಶ್ರಮಿಸಬೇಕು. ಇಲ್ಲಿನ ಯಾವುದೇ ಸಮಸ್ಯೆಗಳಿದ್ದರೂ ನನ್ನನ್ನು ಸಂಪರ್ಕಿಸಿ ಎಂದ ಅವರು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ನಿಗದಿಪಡಿಸಿದ ವಿದ್ಯಾರ್ಥಿಗಳ ಸಂಖ್ಯೆಯನ್ನು ಅಧಿಕಗೊಳಿಸುವಂತೆ ವಿನಂತಿಸುತ್ತೇನೆ ಎಂದರು.

RELATED ARTICLES  ಕೂಲಿ ಕೆಲಸಕ್ಕೆ ಹೋಗಿದ್ದಾತ ನದಿಯಲ್ಲಿ ಬಿದ್ದು ಸಾವು...?

      ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ಅಂಗನವಾಡಿ ಹಂತದಲ್ಲಿಯೇ ಇಂಗ್ಲಿಷ್ ಮಾಧ್ಯಮ ಬಂದಿರುವುದು ಸಂತಸದ ಸಂಗತಿ. ಇಂದಿನ ದಿನಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿಯ ವ್ಯವಹಾರ ಹೆಚ್ಚಾಗಿರುವುದರಿಂದ ಈ ಭಾಷೆಗಳು ಅತೀಹೆಚ್ಚು ಮಹತ್ವ ಪಡೆದಿದೆ ಎಂದರು.

RELATED ARTICLES  ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಭಟ್ಕಳದಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

ಸಭೆಯ ವೇದಿಕೆಯಲ್ಲಿ  ಅಧ್ಯಕ್ಷತೆ ಯನ್ನು ಶ್ರೀಮತಿ ಶೈಲಾ ಗೌಡ, ಉಪಾಧ್ಯಕ್ಷರು ಗ್ರಾಮ ಪಂ, ಸಂತೆಗುಳಿ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಜಿ.ಪಂ ಕಾರವಾರ, ಶ್ರೀಮತಿ ವಿಜಯಾ ಪಟಗಾರ ಅಧ್ಯಕ್ಷರು ತಾ.ಪಂ ಕುಮಟಾ, ಶ್ರೀ ಗಜಾನನ ಪೈ ಜಿಲ್ಲಾ ಪಂ.ಸದಸ್ಯ ರು ಪಾಲ್ಗೊಂಡಿದ್ದರು ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಿನಾಯಕ್ ಭಟ್ಟ , ಸಿರಿಲ್ ಅಲ್ಕೆಡಾ, ನಾಜಿಮಾ ಖಾನ್, ಉಪಸ್ಥಿತರಿದ್ದರು.