ಕುಮಟಾ: ಇನ್ನೇನು ಮಳೆಗಾಲ ಪ್ರಾರಂಭವಾಯ್ತು ಎನ್ನುತ್ತಿರುವಾಗಲೇ ಅವಘಡದ ವರದಿಯೊಂದು ಬಂದಿದೆ.
ಕುಮಟಾ ಹಾಗೂ ಹೊನ್ನಾವರ ಮಾರ್ಗಮಧ್ಯೆ ಹೊಳೆಗದ್ದೆ ಸಮೀಪ ಹೊಸದಾಗಿ ನಿರ್ಮಾಣವಾಗುತ್ತಿರುವ ಚತುಷ್ಪತ ಹೆದ್ದಾರಿಯ ಟೋಲ್ ನಾಕಾ ಬಳಿ ಟ್ಯಾಂಕರ್ ಬಿದ್ದು ಜನತೆಯನ್ನು ಭಯ ಪಡುವಂತೆ ಮಾಡಿದೆ.
ಟೋಲ್ ಗೇಟ್ ಬಳಿ ಮಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಅನಿಲ ತುಂಬಿದ ಟೆಂಕರ್ ಚಾಲಕನ ನಿಯಂತ್ರಣ ತಪ್ಪಿ ಇಪ್ಪತ್ತು ಅಡಿ ಆಳಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.
ಟ್ಯಾಂಕರ್ ನಲ್ಲಿ ಗ್ಯಾಸ್ ತುಂಬಿರುವ ಕಾರಣ ಇದರಿಂದ ಆಗುವ ಅನಾಹುತ ತಪ್ಪಿಸಲು ಕುಮಟಾ ಪೋಲಿಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಅಗತ್ಯ ವ್ಯವಸ್ಥೆ ಹಾಗೂ ಪೂರ್ವ ಸಿದ್ಧತೆಯಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನಲಾಗಿದೆ.