ಕುಮಟಾ : ಬೇಸಿಗೆಯ ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಯ ಜನತೆಗೆ ಇಂದು ಅಬ್ಬರಿಸಿ ಸುರಿದ ಮಳೆ,ಇಳೆಯನ್ನ ಕೊಂಚಮಟ್ಟಿಗೆ ತಂಪು ಮಾಡಿ ಜನತೆಗೆ ಹರ್ಷವನ್ನು ಉಂಟುಮಾಡಿತು.


    ಪ್ರತಿವರ್ಷ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಗಮಿಸುವ ಒಂದೆರಡು ಮಳೆ ಒಂದಷ್ಟು ನೆಮ್ಮದಿಯನ್ನು ತರುತ್ತಿತ್ತು.ಆದರೆ ಈ ವರ್ಷ ಜೂನ್ ತಿಂಗಳಾದರೂ ಮಳೆಯ ಪತ್ತೆಯೇ ಇಲ್ಲವಾಗಿತ್ತು. ಇದು ಮೊದಲೇ ಇತಿಹಾಸದಲ್ಲಿ ಕಂಡುಕೇಳರಿಯದ ರೀತಿಯಲ್ಲಿ ನೀರಿನ ಬರವನ್ನು ಎದುರಿಸುತ್ತಿರುವ ತಾಲೂಕಿನ ಜನತೆಗೆ ಗಾಯದ ಮೇಲೆ ಬರೆಯನ್ನು ಎಳೆದಂತಾಗಿತ್ತು.

RELATED ARTICLES  ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಾವು.

   ಅಂತೂ ಇಂದು ಮಳೆರಾಯನ ದರ್ಶನವಾಗಿದ್ದು, ಜನರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತು.ಭೂಮಿಯನ್ನು ಹದಗೊಳಿಸಿ ಉಳುಮೆ ಮಾಡಿ ಬಿತ್ತನೆ ಮಾಡುತ್ತಿರುವ, ಬಿತ್ತನೆ ಮಾಡಲು ಮಳೆಯನ್ನೇ ಜಾತಕಪಕ್ಷಿಯಂತೆ ಕಾಯುತ್ತಿರುವ ರೈತರೂ ಕೂಡ ಹರ್ಷಗೊಂಡರು.

RELATED ARTICLES  ಗಣೇಶ ಮೂರ್ತಿಯ ವಿಸರ್ಜನೆ ವೇಳೆ ಇರಲಿ ಎಚ್ಚರ : ಇದು ಸತ್ವಾಧಾರ ನ್ಯೂಸ್ ಕಳಕಳಿ