ಅಂಕೋಲಾ : ಅಂಕೋಲಾ ತಾಲ್ಲೂಕಿನ ಸಗಡಗೇರಿ ಗ್ರಾಮಪಂಚಾಯತ ವ್ಯಾಪ್ತಿಯ ಬಳಲೆ ಗ್ರಾಮದಲ್ಲಿ ನಿನ್ನೆ ಉಂಟಾದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿತ್ತು.
ಈ ಪರಿಸ್ಥಿತಿ ಅರಿತು ಇಂದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಕಾಮಗಾರಿ ಬಗ್ಗೆ ವಿಚಾರಿಸಿದರು.
ಈ ಸಂದರ್ಭದಲ್ಲಿ ಐ.ಆರ್.ಬಿ. ಗುತ್ತಿಗೆದಾರರ ಅಸಮರ್ಪಕ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದರು. ತಕ್ಷಣ ಐ. ಆರ್. ಬಿ. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಹಾನಿಗೆ ಕಾರಣ ತಿಳಿದುಕೊಂಡು ನೀರನ್ನು ಖಾಲಿ ಮಾಡಿ ಗ್ರಾಮಸ್ಥರ ವಾಸಕ್ಕೆ ಯೋಗ್ಯಗೊಳಿಸಲು ಯಂತ್ರೋಪಕರಣಗಳನ್ನು ತರಿಸಿ ನೀರು ಸರಾಗವಾಗಿ ಹೋಗುವಂತೆ ಸ್ಥಳದಲ್ಲಿಯೇ ನಿಂತು ವ್ಯವಸ್ಥೆ ಮಾಡಿಕೊಟ್ಟರು.